ಅವಳಿನಗರದ ಪೊಲೀಸ್ ಇನ್ಸಪೆಕ್ಟರಗಳು ಬೆಳ್ಳಂಬೆಳಿಗ್ಗೆ ಎಲ್ಲಿದ್ರೂ ಗೊತ್ತಾ… ಪೊಲೀಸ್ ಕಮೀಷನರ್ ಮಾಡಿದ್ದೇನು..!
1 min readಧಾರವಾಡ: ಪೊಲೀಸ್ ಇಲಾಖೆಯಲ್ಲಿ ಹೊಸ ಪರ್ವವನ್ನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಅವರು ಆರಂಭಿಸಿದ್ದು, ಇಂದು ಎಲ್ಲ ಇನ್ಸಪೆಕ್ಟರುಗಳು ತಾವೂ ಇರಬೇಕಾದ ಜಾಗವನ್ನ ಸ್ಮರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.
ಹೌದು.. ಹುಬ್ಬಳ್ಳಿ-ಧಾರವಾಡದ ಎಲ್ಲ ಠಾಣೆಗಳಲ್ಲಿ ಇಂದು ಎಲ್ಲ ಇನ್ಸಪೆಕ್ಟರುಗಳು ಬೆಳ್ಳಂಬೆಳಿಗ್ಗೆ ಎಂಟು ಗಂಟೆಗೆ ಹಾಜರಾಗಿದ್ದರು. ತಾವೇ ಖುದ್ದು ನಿಂತು ರೋಲ್ ಕಾಲ್ ತೆಗೆದುಕೊಂಡು ಎಲ್ಲರಿಗೂ ಡ್ಯೂಟಿ ನೇಮಿಸಿದ್ದನ್ನ ಗಮನಿಸಿದ್ರು. ಇದು ಅವಳಿನಗರದಲ್ಲಿ ನಡೆದು ಅದೇಷ್ಟು ದಿನಗಳು ಕಳೆದಿದ್ದವೋ ಗೊತ್ತಿಲ್ಲ.
ದಕ್ಷ ಅಧಿಕಾರಿಯಾಗಿರುವ ಐಪಿಎಸ್ ಲಾಬುರಾಮ್ ಅವರು ಒಂದೊಂದು ವ್ಯವಸ್ಥೆಯನ್ನ ಸುಧಾರಿಸುತ್ತ ಮುನ್ನಡೆದಿದ್ದಾರೆ. ಅದರ ಮೊದಲ ಹೆಜ್ಜೆಯಂತೆ ಎಲ್ಲ ಇನ್ಸಪೆಕ್ಟರುಗಳು ಬೆಳಿಗ್ಗೆ ಠಾಣೆಗೆ ಬಂದು ಡ್ಯೂಟಿ ನೇಮಿಸಬೇಕೆಂದು ಆದೇಶವನ್ನ ನಿನ್ನೆ ನೀಡಿದ್ದರು. ಅದನ್ನ ಜಾಜುತಪ್ಪದೇ ಇಂದು ಎಲ್ಲ ಇನ್ಸಪೆಕ್ಟರುಗಳು ನಿಭಾಯಿಸಿದ್ದಾರೆ.
ಇಂತಹ ವಾತಾವರಣ ಹೋಗಿ ಅದೇಷ್ಟೋ ವರ್ಷಗಳು ಕಳೆದಿದ್ದವು. ಡ್ಯೂಟಿ ನೇಮಕ ಮಾಡುತ್ತಿದ್ದೆ ಸಿಬ್ಬಂದಿಗಳು. ಅವರುಗಳು ಹೇಳಿದ್ದಕ್ಕೆ ಸಹಿ ಹಾಕಿ ಸುಮ್ಮಿನಿರುತ್ತಿದ್ದ ಇನ್ಸಪೆಕ್ಟರುಗಳಿಗೆ ಇಂದು ಹೊಸತನದ ಕರ್ತವ್ಯ ಮಾಡುವ ಅವಕಾಶವನ್ನ ಕಮೀಷನರ್ ಲಾಬುರಾಮ್ ಅವರು ಸೃಷ್ಠಿಸಿದ್ದರು.
ಠಾಣೆಗಳಲ್ಲಿರುವ ನ್ಯೂನ್ಯತೆಯನ್ನ ಕಡಿಮೆ ಮಾಡಲು ಮುಂದಾಗಿರುವ ಕಮೀಷನರ್ ಅವರು ಹಲವು ರೀತಿಯಲ್ಲಿ ಜಿಡ್ಡುಗಟ್ಟಿರುವ ವಾತಾವರಣವನ್ನ ಸರಿ ಮಾಡುತ್ತಿದ್ದಾರೆ. ಪೊಲೀಸ್ ಪೊಲೀಸರಲ್ಲಿ ನಂಬಿಕೆಯನ್ನ ಬೆಳೆಸುವುದಕ್ಕೆ ಅವರು ಮುಂದಾಗುತ್ತಿದ್ದಾರೆ. ಮೊದಲು ನಡೆದ ಎಲ್ಲ ಕಹಿ ಘಟನೆಗಳನ್ನ ಮರೆಸಲು ಕಮೀಷನರ್ ಮುಂದಾಗಿರುವುದು ಎದ್ದು ಕಾಣುತ್ತಿದೆ.