ಹುಬ್ಬಳ್ಳಿ: “ನನ್ನ ಮಗನ್ ಕೊಡಸ್ರೀ ಸರ್” ಇದ್ದೊಬ್ಬ ಮಗನನ್ನ ಕಳೆದುಕೊಂಡ ಅಪ್ಪನ ಆಕ್ರಂದನ…!!!

ಹುಬ್ಬಳ್ಳಿ: ತಮಗಿದ್ದ ಒಬ್ಬೇ ಒಬ್ಬ ಮಗನನ್ನ ಹುಲಿಯಂಗೆ ಬೆಳೆಸಿದ್ದೆ. ದೇವರು ಕಸಿದುಕೊಂಡು ಬಿಟ್ಟ. ಎಲ್ರೂ ನಮ್ಮಿಬ್ಬರನ್ನ ಗೆಳೆಯರು ಅಂತಿದ್ರು. ಹಂಗ್ ಇದ್ದೀವ್ರಿ ನಾವ್ ಎನ್ನುತ್ತಿದ್ದ ಸಂಜಯ ತಂದೆಯ ಕಣ್ಣೀರು ಕೋಡಿಯಂತೆ ಹರಿಯತೊಡಗಿತ್ತು.
ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ದುರಂತದಲ್ಲಿ ಸಾವಿಗೀಡಾದ ಯುವಕನ ತಂದೆ ಪ್ರಕಾಶ, ನೋವಿನಿಂದ ಬಳಲಿದ್ದರು.
ಸಂಜಯ ಎಲ್ಲರಿಗೂ ಇಷ್ಟವಾದ ಹುಡುಗನಾಗಿದ್ದ. ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿ, ವೃತವನ್ನ ಚೆನ್ನಾಗಿ ಮಾಡಿಕೊಂಡಿದ್ದ. ಯಾರ್ ಕಣ್ಷು ನಮ್ಮ ಮೇಲೆ ಬಿತ್ತೋ ಎಂದು ಕಣ್ಣೀರಾಗುತ್ತಿದ್ದ ತಂದೆಯನ್ನ ನೋಡಿ ಉಳಿದವರಲ್ಲೂ ನೋವನ್ನುಂಟು ಮಾಡಿದ ದೃಶ್ಯ ಕಂಡು ಬಂದಿತು.