ಬೆಳೆವಿಮೆ “ಪರಿಹಾರ 50-50”- BIG ಇಂಪ್ಯಾಕ್ಟ್- ದಂಧೆ ತನಿಖೆಗೆ ಸರಕಾರದ ಆದೇಶ…!!!

ಧಾರವಾಡ: ಬಡ ರೈತರಿಗೆ ಮೋಸ ಮಾಡುತ್ತ ಕೆಲ ಶ್ರೀಮಂತ ರೈತರೆನಿಸಿಕೊಂಡ ಏಜೆಂಟರು ಬೆಳೆವಿಮೆ ಪರಿಹಾರದಲ್ಲಿ 50-50 ಅನುಪಾತದಲ್ಲಿ ಹಣ ಪಡೆಯುತ್ತಿರುವ ಕುರಿತು ಕರ್ನಾಟಕವಾಯ್ಸ್. ಕಾಂ ನಿರಂತರವಾಗಿ ಹೊರ ಹಾಕಿದ ಮಾಹಿತಿಯು ಸಾರ್ಥಕತೆಯನ್ನ ಕಾಣತೊಡಗಿದೆ.
ರಾಜ್ಯ ಸರಕಾರದ ಕೃಷಿ ಇಲಾಖೆ ಅಧಿಕೃತವಾಗಿ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, 50-50 ಮೋಸದ ಬಗ್ಗೆ ಸಮಗ್ರವಾಗಿ ತನಿಖೆ ಮಾಡುವಂತೆ ಕೋರಲಾಗಿರುವ ಪತ್ರವೂ ಕೆವಿಗೆ ಲಭಿಸಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋದಂಣಿ ಸಮಯದಲ್ಲಿ ಏಜೆಂಟರುಗಳಿಂದ ಮೋಸ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಕೊಡಲು ರಾಜ್ಯದ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರುಗಳಿಗೆ ಆದೇಶ ಮಾಡಲಾಗಿದೆ.
ಧಾರವಾಡ, ಗದಗ ಹಾಗೂ ಹಾವೇರಿಯಲ್ಲಿ ನಡೆದಿರುವ ಈ ಅಕ್ರಮ ದಂಧೆಯ ಎಳೆ ಎಳೆಯನ್ನ ನಿರಂತರವಾಗಿ ಕರ್ನಾಟಕವಾಯ್ಸ್. ಕಾಂ ಹೊರ ಹಾಕುತ್ತ ಬಂದಿದ್ದು, ಇದಕ್ಕೊಂದು ತಾರ್ಕಿಕ ಅಂತ್ಯ ಸಿಗುವ ಜೊತೆಗೆ ಬಡ ರೈತರಿಗೆ ಅನುಕೂಲವಾಗುವುದು ಮುಖ್ಯವಾಗಿದೆ.
ರಾಜ್ಯ ಸರಕಾರದ ಪತ್ರ, ಗ್ರಾಮ ಒನ್, ಸಿಎಸ್‌ಸಿ ಸೆಂಟರ್ ಮತ್ತು ಬ್ಯಾಂಕಿನ ಐಡಿಯ ಕುರಿತು ನಾಳೆಯ ಸುದ್ದಿಯಲ್ಲಿ ನಿರೀಕ್ಷಿಸಿ.