ಹುಬ್ಬಳ್ಳಿಯಲ್ಲಿ “ಮಹೇಂದ್ರ ಶೋ ರೂಂ” ಮಾಲೀಕನ ಮನೆಯಲ್ಲಿ “ಕೈ ಕಾಲು ಕಟ್ಟಿ” ದರೋಡೆ…!!!
ಹುಬ್ಬಳ್ಳಿ: ಉಣಕಲ್ ಕೆರೆಯ ಎದುರಿಗೆ ಇರುವ ಮಹೇಂದ್ರ ಶೋ ರೂಂ ಮಾಲೀಕನ ವಿಜಯನಗರದ ನಿವಾಸದಲ್ಲಿ ಸೆಕ್ಯುರಿಟಿಯ ಕೈಕಾಲು ಕಟ್ಟಿ ದರೋಡೆ ಮಾಡಿರುವ ಪ್ರಕರಣ ನಡೆದಿದ್ದು, ಪೊಲೀಸರು ಶ್ವಾನದಳದ ಸಮೇತ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸುತಾರಿಯಾ ಶೋ ರೂಂ ಮಾಲೀಕ ಸಚಿನ ಶಾ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಡಿಸಿಪಿ ಮಹಾನಿಂಗ ನಂದಗಾವಿ ಸೇರಿದಂತೆ ಇನ್ನುಳಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ…
ಸೆಕ್ಯುರಿಟಿ ಗಾರ್ಡ್ ವಿರುಪಾಕ್ಷಯ್ಯ ಹಿರೇಮಠ ಎಂಬುವವರನ್ನ ಕಟ್ಟಿ ದರೋಡೆ ಮಾಡಲಾಗಿದ್ದು, ಗಾಯಗೊಂಡಿರುವ ಸೆಕ್ಯುರಿಟಿಯನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಾಠಿ ಮಾತನಾಡುತ್ತಿದ್ದ ನಾಲ್ಕರಿಂದ ಐದು ಜನರು ದರೋಡೆ ಮಾಡಿರುವ ಬಗ್ಗೆ ಶಂಕೆವ್ಯಕ್ತವಾಗಿದೆ.