Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ನೂಲ್ವಿ” ಚೀಟಿಂಗ್: ಅಂದರ್ ಆದ ಲಕ್ಷಾಧೀಶ..!

1 min read
Spread the love

ಹುಬ್ಬಳ್ಳಿ: ನಗರದ ಅವಲಕ್ಕಿ ವ್ಯಾಪಾರಸ್ಥರಾಗಿದ್ದ ನೂಲ್ವಿ ಟ್ರೇಡರ್ಸ್ ಮಾಲೀಕರುಗಳು ಚಿಟ್ ಫಂಡ್ ಹಣವನ್ನ ಮರಳಿಸದೇ ಚೆಕ್ ನೀಡಿ ವಂಚನೆ ಮಾಡಿದ್ದಾರೆಂದು ನ್ಯಾಯಾಲಯದಲ್ಲಿ ಆದೇಶವಾದ ಹಿನ್ನೆಲೆಯಲ್ಲಿ ನೂಲ್ವಿ ಟ್ರೇಡರ್ಸ ಓರ್ವನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮತ್ತೋರ್ವರು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.

ಉಣಕಲ್ ಗ್ರಾಮದ ಮಲ್ಲಿಕಾರ್ಜುನ ದ್ಯಾಮಣ್ಣಾ ಮೆಣಸಿನಕಾಯಿ ಎಂಬುವವರಿಗೆ ನೂಲ್ವಿ ಟ್ರೇಡರ್ಸನ ರಾಜಶೇಖರ ಸಂಗಪ್ಪ ನೂಲ್ವಿ ಹಾಗೂ ಮಂಜುನಾಥ ಸಂಗಪ್ಪ ನೂಲ್ವಿ ಚಿಟ್ ಫಂಡನಿಂದ ಪಡೆದ ಹಣದ ಪೈಕಿ 10 ಲಕ್ಷ ರೂಪಾಯಿಯ ಎರಡು ಚೆಕ್ ಗಳನ್ನ ನೀಡಿದ್ದರು. ಅವುಗಳು ಬ್ಯಾಂಕಿನಲ್ಲಿ ಬೌನ್ಸ್ ಆದ ಮೇಲೆ, ಪ್ರಕರಣವನ್ನ ದಾಖಲು ಮಾಡಲಾಗಿತ್ತು.

New Doc 2021-02-12 17.43.04

ನ್ಯಾಯಾಲಯದ ಆದೇಶದ ಮೇರೆಗೆ ರಾಜಶೇಖರ ನೂಲ್ವಿಯನ್ನ ನ್ಯಾಯಾಲಯಕ್ಕೆ ಹಾಜರು ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪ್ರತಿ ತಿಂಗಳು 2 ಲಕ್ಷ ರೂಪಾಯಿ ತುಂಬುವ ಬಿಸಿಯನ್ನ ನಾಲ್ಕು ತಿಂಗಳು ತುಂಬಿದ ನಂತರ 40 ಲಕ್ಷ ರೂಪಾಯಿಯ ಬಿಸಿಯನ್ನ ನೂಲ್ವಿ ಬದ್ರರ್ಸ್ ಪಡೆದಿದ್ದರು. ತಾವು ತುಂಬಿದ ಹಣ ಬಿಟ್ಟು ಇನ್ನುಳಿದ ಹಣವನ್ನ ಕೊಡಲು ಪತ್ರವನ್ನ ಮಲ್ಲಿಕಾರ್ಜುನ ಮೆಣಸಿನಕಾಯಿ ಅವರಿಗೆ ಬರೆದು, ಚೆಕ್ ಗಳನ್ನೂ ನೀಡಿದ್ದರು.

ಅದೇ ಪ್ರಕರಣವೀಗ, ಇಂತಹ ಸ್ಥಿತಿಗೆ ಬಂದು ತಲುಪಿದ್ದು, ಒಂದು ಕಾಲದ ಲಕ್ಷಾಧೀಶ ಇಂದು ಜೈಲು ಪಾಲಾಗುವ ಸ್ಥಿತಿಗೆ ಬಂದಿರುವುದು ಸೋಜಿಗ ಮೂಡಿಸುತ್ತಿದೆ.


Spread the love

Leave a Reply

Your email address will not be published. Required fields are marked *