ಹುಬ್ಬಳ್ಳಿಯ BJP ಮಾಜಿ ಶಾಸಕ ಜೆಡಿಎಸ್‌ಗೆ ಸೇರ್ಪಡೆ…
1 min read
ಬೆಂಗಳೂರು: ಭಾರತೀಯ ಜನತಾ ಪಕ್ಷದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರು ಇಂದು ಅಧಿಕೃತವಾಗಿ ಜಾತ್ಯಾತೀತ ಜನತಾದಳವನ್ನ ಪಕ್ಷದ ಕಚೇರಿಯಲ್ಲಿ ಸೇರ್ಪಡೆಗೊಂಡರು.
2008 ರಲ್ಲಿ ಹುಬ್ಬಳ್ಳಿಯ ಪೂರ್ವ ಮೀಸಲು ಕ್ಷೇತ್ರದಲ್ಲಿ ಗೆದ್ದು ಬಂದಿದ್ದ ವೀರಭದ್ರಪ್ಪ ಅವರಿಗೆ ತದನಂತರ ಆ ಕ್ಷೇತ್ರಕ್ಕೆ ಬಿಜೆಪಿ ಹೊಸ ಮುಖಕ್ಕೆ ಟಿಕೆಟ್ ನೀಡಿತ್ತು. ಹಾಗಾಗಿ, ಅಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತ ಬಂದಿದೆ.
ಈ ಬಾರಿ ತಮಗೆ ಟಿಕೆಟ್ ನೀಡಬಹುದೆಂಬ ಭಾವನೆ ಹೊಂದಿದ್ದ ಹಾಲಹರವಿ ಅವರಿಗೆ ಬಿಜೆಪಿ ಟಿಕೆಟ್ ಸಿಗೋದಿಲ್ಲವೆಂಬ ಕಾರಣಕ್ಕೆ ಜೆಡಿಎಸ್ ಸೇರಿ, ಚುನಾವಣೆಗೆ ಎದುರಿಸಲಿದ್ದಾರೆ.
ಮೊದಲಿಂದಲೂ ಜಾತ್ಯಾತೀತ ಮನೋಭಾವನೆ ಹೊಂದಿದ್ದ ವೀರಭದ್ರಪ್ಪ ಹಾಲಹರವಿಯವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಸೃಷ್ಟಿ ಮಾಡಲಾಗಿತ್ತೆಂದು ಹೇಳಲಾಗಿದೆ. ಜೆಡಿಎಸ್ ಪಂಚರತ್ನ ಯಾತ್ರೆಯ ಸಮಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜೊತೆ ಮಾತುಕತೆಯಾಗಿದ್ದು, ಇಂದು ಅದು ಅಧಿಕೃತವಾಗಿದೆ.