ಬ್ರೈನ್ ಟ್ಯೂಮರ್ ರೋಗಿಗೆ ಸಹಾಯ ಹಸ್ತ ಚಾಚಿದ ಅಬ್ದುಲ್ ಘನಿ

ಹುಬ್ಬಳ್ಳಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬೆಂಗೇರಿಯ ಬ್ರೈನ್ ಟ್ಯೂಮರ್ ರೋಗಿ ಮಮ್ತಾಜ್ ಮುಲ್ಲಾರಿಗೆ ಧನಸಹಾಯದ ಚೆಕ್ಕನ್ನು ಅಬ್ದುಲ್ ಘನಿ ವಲಿಅಹ್ಮದ್ ನೀಡಿದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಬ್ರೈನ್ ಟ್ಯೂಮರ್ ರೋಗಿಯಾದ ಮುಮ್ತಾಜ್ ಮುಲ್ಲಾ ಅನಾರೋಗ್ಯದಿಂದ ಬಳಲುತ್ತಿದ್ದರು. ದಿನದಿಂದ ದಿನ ಸಮಸ್ಯೆ ಹೆಚ್ಚಾಗಿ ಆದಷ್ಟು ಬೇಗನೆ ಆಪರೇಷನ್ ಮಾಡಬೇಕೆಂದು ವೈದ್ಯರು ಸೂಚನೆ ನೀಡಿದ್ದರು. ಇಂತಹ ಸಂಕಷ್ಟದಲ್ಲಿ ಅವರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ್ದನ್ನರಿತ ಅಬ್ದುಲ್ ಘನಿ ವಲಿಅಹ್ಮದ್ ಕೈಯಲ್ಲಾದ ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಲ್ತಾಫ್ ಹಳ್ಳೂರ, ಜಾಮೀಯಾ ಮಸೀದಿಯ ಮುತವಲ್ಲಿ ಹಸನಸಾಬ್ ಮುಲ್ಲಾ, ಹಟೇಲಸಾಬ್ ಮುಲ್ಲಾ, ಮೌಲಿ ಮುಲ್ಲಾ, ಅಮದ್ ಮುಲ್ಲಾ, ಕಾಶೀಂ ಕೂಡಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.