ಇಂಟರ್ ಲಾಕ್ ಮುರಿದು ಮನೆ ಕಳ್ಳತನ: ಹುಬ್ಬಳ್ಳಿ ಸಿಲ್ವರ ಟೌನದಲ್ಲಿ ಏನೇಲ್ಲಾ ದೋಚಿದ್ದಾರೆ ಗೊತ್ತಾ..?
1 min readಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿರುವ ಕಳ್ಳರು ಕೀಲಿ ಮತ್ತು ಇಂಟರಲಾಕ್ ನ್ನ ಮುರಿದು ಕಳ್ಳತನ ಮಾಡಿರುವ ಪ್ರಕರಣ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲ್ವರಟೌನ್ ದಲ್ಲಿ ಸಂಭವಿಸಿದೆ.
ಅವಿನಾಶ ಗೌಡರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಮನೆಯಲ್ಲಿದ್ದ ಟಿವಿ ಮತ್ತು ಹೊರಗಡೆ ನಿಲ್ಲಿಸಿದ್ದ ಸ್ಕೂಟಿಯನ್ನ ಕದ್ದು ಪರಾರಿಯಾಗಿದ್ದಾರೆಂದು ಅವಿನಾಶ ಗೌಡರ ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವ್ಯಾಪಾರಿಯಾಗಿರುವ ಅವಿನಾಶ ಗೌಡರ 14-11.2020 ರಿಂದ ಮನೆಗೆ ಕೀಲಿ ಹಾಕಿ ಬೇರೆ ಸ್ಥಳಕ್ಕೆ ಹೋಗಿ ಮರಳಿ ಬಂದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಮನೆಯಾಗಲಿ, ಅಕ್ಕಪಕ್ಕದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗೋಕುಲ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಪ್ರಕರಣವನ್ನ ಭೇದಿಸಲು ತನಿಖೆ ಆರಂಭಿಸಿದ್ದಾರೆ.