ಹುಬ್ಬಳ್ಳಿ ಹೊಸೂರು ಸರ್ಕಲ್: ‘161’ಮಾಡಿದ ASI,PC: ಇವರನ್ನೇ ಚೆಂಬು ಮಾಡಿದ ಹಿರಿಯ ಅಧಿಕಾರಿ.. ಮಧ್ಯಸ್ಥಿಕೆ ವಹಿಸಿದ್ದು ಯಾರೂ ಗೊತ್ತಾ..?
1 min readಹುಬ್ಬಳ್ಳಿ: ನಗರದ ಹೊಸೂರು ವೃತ್ತದಲ್ಲಿ ಬೆಳ್ಳಂಬೆಳಿಗ್ಗೆ ಸಂಚಾರಿ ಠಾಣೆಯ ಓರ್ವ ಎಎಸ್ಐ ಹಾಗೂ ಪೇದೆಯೋರ್ವ ಸೇರಿಕೊಂಡು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಹಾಗೇ ಯಾರಿಗೂ ತಿಳಿಯದ ಹಾಗೇ ‘161’ ಮಾಡಿದ್ದರು. ಆದರೆ, ಬೆಕ್ಕಿನ ಹಿರಿಯಣ್ಣನಿಗೆ ಅದು ತಿಳಿದು ಬಿಟ್ಟಿದೆ. ಅದೇ ಕಾರಣಕ್ಕೆ ಹಿರಿಯ ಅಧಿಕಾರಿ, ಕುಡಿದ ಹಾಲನ್ನ ಕಕ್ಕಿಸಿ, ಮುಕ್ಕರಿಸಿರುವ ಘಟನೆ ನಡೆದಿದ್ದು, ಕಣ್ಣು ಮುಚ್ಚಿ ಹಾಲು ಕುಡಿದಷ್ಟೇ ಸತ್ಯವಾಗಿದೆ.
ಹೊಸೂರು ವೃತ್ತದಲ್ಲಿ ಧಾರವಾಡ ಮೂಲದ ಎಎಸ್ಐ ಹಾಗೂ ಜೊತೆಗಾರ ಪೊಲೀಸ್ ಆ ವಾಹನವನ್ನ ತಡೆದು ಹಣವನ್ನ ಹೊಡೆದಿದ್ದರು. ಅದನ್ನ ಯಾರೂ ನೋಡಿಯೇ ಇಲ್ಲವೆನ್ನುವಾಗಲೇ, ಆ ಹಿರಿಯ ಅಧಿಕಾರಿ ಅಲ್ಲಿಗೆ ಬಂದು ಬಿಟ್ಟಿದ್ದರು. ಸೋಜಿಗವೆಂದರೇ, ಕಳ್ಳರಂತೆ ಓಡಿ ಹೋಗಿದ್ದು, ಅದೇ ಎಎಸ್ಐ ಮತ್ತು ಆ ಪೊಲೀಸ್.
ಬೆಕ್ಕಿನ ಅಣ್ಣನಂತಿರುವ ಆ ಹಿರಿಯ ಹಿರಿಯ ಅಧಿಕಾರಿಗೇ ಇಷ್ಟೇ ಬೇಕಿತ್ತು. ಹಾಗಾಗಿಯೇ, ಹಿರಿಯ ಅಧಿಕಾರಿಯ ವರಸೆ ಆರಂಭಿಸಿ, ನೌಕರಿ ಕಳೆಯುವಾಟ ಆರಂಭಿಸಿದ್ರು. ಒನ್ಸ್ ಅಗೇನ್, ಪರಿಚಯಸ್ಥ ಇನ್ಸಪೆಕ್ಟರ್ ಮಧ್ಯಸ್ತಿಕೆ ವಹಿಸಿ, ಎಲ್ಲವನ್ನೂ ಸುಖಾಂತ್ಯ ಮಾಡಿದ್ದಾರೆ.
ಸಣ್ಣ ಬೆಕ್ಕುಗಳು ತಿಂದಿದ್ದೇಷ್ಟು ಎನ್ನುವುದು ಗೊತ್ತಾಗುವ ಮುನ್ನ, ದೊಡ್ಡ ಬೆಕ್ಕು ಇಬ್ಬರಿಂದ 60 ಸಾವಿರ ಪಡೆದು, ನಾಲಿಗೆ ಹೊರಳಾಡಿಸಿದೆ ಎಂದು ಗೊತ್ತಾಗಿದೆಯಷ್ಟೇ.. ಮುಂದಿನದ್ದನ್ನ ‘ರಾಮ’ನೇ ನೋಡಿಕೊಳ್ಳಬೇಕಿದೆ.