ಶಿಕ್ಷಕರ ವರ್ಗಾವಣೆ: ಬಸವರಾಜ ಹೊರಟ್ಟಿಗೆ ಪತ್ರ ಬರೆದ ಗ್ರಾಮೀಣ ಸಂಘ.. ಕಾರಣವೇನು ಗೊತ್ತಾ..?
ಹುಬ್ಬಳ್ಳಿ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಖಾಲಿ ಹುದ್ದೆಗಳನ್ನ ಗುರುತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆರಂಭಿಸಿದ್ದು, ಈ ಬಗ್ಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರಿಗೆ ಮನವಿ ಮಾಡಿಕೊಂಡಿದೆ. ಅದೇನು ಅನ್ನೋದನ್ನ ಪೂರ್ಣವಾಗಿ ಓದಿ ತಿಳಿಯಿರಿ.
ಸರಕಾರ ಆರಂಭಿಸಿರುವ ಪ್ರಕ್ರಿಯ ಬಗ್ಗೆ ಸಂಘವೂ, 2020-21 ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಖಾಲಿ ಹುದ್ದೆಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆರಂಭಿಸಿದ್ದು ಖಾಲಿ ಹುದ್ದೆಗಳನ್ನು 01-09-2020 ರಲ್ಲಿ ಇದ್ದಂತೆ ಪರಿಗಣಿಸಲು ತನ್ಮೂಲಕ ಹೈದ್ರಾಬಾದ್ (ಕಲ್ಯಾಣ) ಕರ್ನಾಟಕ ಭಾಗದ ಶಿಕ್ಷಕರಿಗೆ ವರ್ಗಾವಣೆಗೆ ಅನುಕೂಲ ಮಾಡಿಕೊಡಬೇಕಾಗಿ ಹೊರಟ್ಟಿಯವರಿಗೆ ಮನವಿ ಮಾಡಿಕೊಂಡಿದೆ.
ಅಧಿವೇಶನದ ಸಮಯದಲ್ಲೇ ಮನವಿ ಮಾಡಿಕೊಂಡಿರುವ ಸಂಘವೂ, ಶಿಕ್ಷಕರಿಗೆ ಅನುಕೂಲವಾಗುವ ಭರವಸೆಯನ್ನ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ವ್ಯಕ್ತಪಡಿಸಿದ್ದಾರೆ.
ಮನವಿ ಪ್ರತಿ ಹೀಗಿದೆ.
ಗೆ,
ಮಾನ್ಯ ಶ್ರೀ ಬಸವರಾಜ.ಎಸ್. ಹೊರಟ್ಟಿಯವರು, ಮಾಜಿ ಶಿಕ್ಷಣ ಸಚಿವರು ಮತ್ತು ಮಾಜಿ ವಿಧಾನ ಪರಿಷತ್ ಸಭಾಪತಿಗಳು ಮತ್ತು ಹಾಲಿ
ವಿಧಾನ ಪರಿಷತ್ ಸದಸ್ಯರು,
ಕರ್ನಾಟಕ ಸರ್ಕಾರ, ಬೆಂಗಳೂರು 01
ಮಾನ್ಯರೆ,
ವಿಷಯ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಖಾಲಿ ಹುದ್ದೆಗಳನ್ನು ಗುರುತಿಸುವ ಬಗ್ಗೆ.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿಯ ರಾಜ್ಯಾಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಈ ಮೂಲಕ ತಮ್ಮಲ್ಲಿ ವಿನಂತಿಸುವುದೇನೆಂದರೆ
2020-21 ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಖಾಲಿ ಹುದ್ದೆಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆರಂಭಿಸಿದ್ದು ಖಾಲಿ ಹುದ್ದೆಗಳನ್ನು 01-09-2020 ರಲ್ಲಿ ಇದ್ದಂತೆ ಪರಿಗಣಿಸಲು ತನ್ಮೂಲಕ ಹೈದ್ರಾಬಾದ್ (ಕಲ್ಯಾಣ) ಕರ್ನಾಟಕ ಭಾಗದ ಶಿಕ್ಷಕರಿಗೆ ವರ್ಗಾವಣೆಗೆ ಅನುಕೂಲ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ
ಒಂದು ವೇಳೆ ಈ ದಿನಾಂಕದ ನಂತರದ ಖಾಲಿ ಹುದ್ದೆಗಳನ್ನು ಗುರುತಿಸಿದಲ್ಲಿ ಬಹುತೇಕ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಶಿಕ್ಷಕರು 25% ಖಾಲಿ ಹುದ್ದೆಗಳಿರುವ ತಾಲೂಕಿನಿಂದ ವರ್ಗಾವಣೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂಬ ನಿಯಮದಂತೆ ಘಟಕದ ಒಳಗೆ ಹಾಗೂ ಹೊರಗೆ ವರ್ಗಾವಣೆ ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ ಕಾರಣ ತಾವುಗಳು ಈ ವಿಷಯವನ್ನು ಮಾನ್ಯ ಶಿಕ್ಷಣ ಸಚಿವರ ಗಮನಕ್ಕೆ ತಂದು ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ