ಅಸ್ವಸ್ಥರಾಗಿದ್ದ ಹಿರೇಮಠ ಭೇಟಿ ಮಾಡಿದ ಸಂತೋಷ ಲಾಡ
1 min readಧಾರವಾಡ: ಹೊಸೂರು ಉಡಗಣಿ ತಾಳಗುಂದ ಏತ ನೀರಾವರಿಗಾಗಿ ರೈತರ ಜಮೀನು ಭೂ ಸ್ವಾಧೀನ ವಿರೋಧಿಸಿ ಅಮರಣಾಂತ ಉಪವಾಸ ನಡೆಸಿ ಅಸ್ವಸ್ಥಗೊಂಡು ಚೇತರಿಕೆ ಕಾಣುತ್ತಿರುವ ಹೈಕೋರ್ಟ್ ನ್ಯಾಯವಾದಿ ಬಿ.ಡಿ.ಹಿರೇಮಠ ಅವರನ್ನ ಮಾಜಿ ಸಚಿವ ಸಂತೋಷ ಲಾಡ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಧಾರವಾಡ ಸಮೀಪದ ಫಾರ್ಮ್ ಹೌಸನಲ್ಲಿ ಭೇಟಿಯಾದ ಸಂತೋಷ ಲಾಡ, ಆರೋಗ್ಯದ ಬಗ್ಗೆ ಜಾಗೃತೆ ವಹಿಸುವಂತೆ ಕೇಳಿಕೊಂಡರು.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಬಳಿ ಸರಕಾರಿ ಜಮೀನಿನಲ್ಲಿ ಪೈಪ್ ಲೈನ್ ಜೋಡಿಸುವ ಬದಲಾಗಿ ರೈತರ ಜಮೀನಿನಲ್ಲಿ ಪೈಪಲೈನ್ ಅಳವಡಿಕೆ ಮಾಡಿ, ರೈತರಿಗೆ ನೀರಾವರಿ ಸಿಗದಂತಾಗಿದೆ ಎಂಬುದನ್ನು ಹಿರೇಮಠ ಅವರು, ಲಾಡ ಅವರಿಗೆ ತಿಳಿಸಿದರು.
ನೀರಾವರಿ ಹೆಸರಿನಲ್ಲಿ ರೈತರ ವಂಚನೆ ನಿಲ್ಲಲಿ ಎಂಬ ಉದ್ದೇಶ ಹೋರಾಟ ನಡೆದಿತ್ತು. ಹದಿನೆಂಟು ನೂರು ರೈತರಿಗೆ ಅನ್ಯಾಯವಾಗಿದೆ ಎಂಬ ವಿವರವನ್ನೂ, ಲಾಡ ಅವರಿಗೆ ಹಿರೇಮಠ ವಿವರಿಸಿದರು.
ರೈತರಿಗಾಗಿ ನಡೆಯುವ ಹೋರಾಟಕ್ಕೆ ತಮ್ಮ ಬೆಂಬಲ ಸದಾಕಾಲ ಇರತ್ತೆ. ನಿಮ್ಮ ಹೋರಾಟಕ್ಕೆ ಬೆಂಬಲ ನೀಡುವೆ ಎಂದು ಸಂತೋಷ ಲಾಡ, ಹಿರೇಮಠ ಅವರಿಗೆ ಭರವಸೆ ನೀಡಿದರು.
ಕೆಪಿಸಿಸಿ ಸದಸ್ಯ ಎಸ್.ಆರ್.ಪಾಟೀಲ, ರಾಜಶೇಖರ ಮೆಣಸಿನಕಾಯಿ, NWKRTC ಮಾಜಿ ನಿರ್ದೇಶಕ ಆನಂದ ಕಲಾಲ, ಕೆಪಿಸಿಸಿ ಕೋ ಆರ್ಡಿನೇಟರ್ ಬಂಗಾರೇಶ ಹಿರೇಮಠ, ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಮುರಳ್ಳಿ, ಹರಿಶಂಕರ, ಗಾಯಕವಾಡ, ಸೋಮು, ಮೋಹನ ಹಿರೇಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.