ಹಿಂಡಲಗಾ ಜೈಲಿನಿಂದ ಹುಬ್ಬಳ್ಳಿ ಸಿಆರ್ ಮೈದಾನಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ
1 min readಹುಬ್ಬಳ್ಳಿ: ಮೂರು ದಿನಗಳವರೆಗೆ ಸಿಬಿಐ ತನ್ನ ಸುಪರ್ಧಿಗೆ ಪಡೆದಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಹುಬ್ಬಳ್ಳಿ ಹೊರವಲಯದಲ್ಲಿರುವ ಶಸಸ್ತ್ರ ಮೀಸಲು ಪಡೆಯ ಕಚೇರಿಗೆ ತೆಗೆದುಕೊಂಡು ಬರಲಾಗಿದೆ.
2016ರ ಜೂನ್ 15ರಂದು ನಡೆದ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣ ನಡೆದಿತ್ತು. ಈ ಕೊಲೆ ಪ್ರಕರಣವನ್ನ ಸಿಬಿಐಗೆ ನೀಡುವಂತೆ ಕುಟುಂಬಸ್ಥರು ಕೇಳುತ್ತಲೇ ಬಂದಾಗ, ಬಿಜೆಪಿ ಸರಕಾರ ಬಂದ ಮೇಲೆ ಈ ಪ್ರಕರಣವನ್ನ 2019ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ, ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿತ್ತು.
ಬಂಧನದ ನಂತರ ಬೆಳಗಾವಿ ಜೈಲಿಗೆ ರವಾನೆ ಮಾಡಲಾಗಿತ್ತು. ನಿನ್ನೆ ಸಿಬಿಐ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಮತ್ತಷ್ಟು ವಿಚಾರಣೆ ಸಂಬಂಧ ತಮ್ಮ ವಶಕ್ಕೆ ನೀಡುವಂತೆ ಮನವಿಯನ್ನ ಮಾಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮೂರು ದಿನಗಳವರೆಗೆ ವಿನಯ ಕುಲಕರ್ಣಿಯವರನ್ನ ಸಿಬಿಐ ವಶಕ್ಕೆ ನೀಡಿದೆ.
ನವೆಂಬರ್ 9ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಸಿಬಿಐ ಅದಕ್ಕೂ ಮುನ್ನ ವಿಚಾರಣೆಯನ್ನ ನಡೆಸಲಿದ್ದಾರೆ. ಈಗಾಗಲೇ ಮೊದಲ ದಿನವೇ ಏಳು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿದ್ದು, ಇಂದಿನಿಂದ ಮತ್ತೆ ವಿಚಾರಣೆ ಮುಂದುವರೆಯಲಿದೆ.