ಹವಾಲ್ದಾರನ ಪತ್ನಿಯೀಗ ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷೆ: ಗೆದ್ದು ಬಿದ್ದ ಕಾಂಗ್ರೆಸ್..!
1 min readಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಠಿಯಾಗಿದೆ. ಅಷ್ಟೇ ಅಲ್ಲ, ತಮ್ಮನ್ನೇ ಜಾಣರೂ ಎಂದುಕೊಂಡಿದ್ದ ಕಾಂಗ್ರೆಸ್ ಪಕ್ಷದವರ ಯಡವಟ್ಟು ಬಯಲಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿತರು, ಬರೋಬ್ಬರಿ 30 ತಿಂಗಳು ಅಧಿಕಾರದಿಂದ ದೂರವುಳಿಬೇಕಾಗಿ ಬಂದಿದ್ದು, ಹೆಬ್ಬಳ್ಳಿ ಗ್ರಾಮ ಪಂಚಾಯತಿಗೆ ಪೊಲೀಸ್ ಇಲಾಖೆಯ ಹವಾಲ್ದಾರ ತಮ್ಮಾಜಿರಾವ ತಲವಾಯಿವರ ಪತ್ನಿ ತೇಜಸ್ವಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚು ಸೀಟು ಹೊಂದಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಪ್ರವಾಸಕ್ಕೆ ಹೋಗಿ ಮರಳಿ ಬರುವುದರಲ್ಲೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಮಯವೇ ಮುಗಿದು ಹೋಗಿತ್ತು. ಹೀಗಾಗಿ, 15 ಸದಸ್ಯರ ಬೆಂಬಲಿವಿದ್ದ ಬಿಜೆಪಿ ಬೆಂಬಲಿತ ಸದಸ್ಯರ ಪೈಕಿ ತೇಜಸ್ವಿನಿ ತಲವಾಯಿ ಅಧ್ಯಕ್ಷ ಸ್ಥಾನಕ್ಕೂ, ವಿಠ್ಠಲ ಇಂಗಳೆ ಉಪಾಧ್ಯಕ್ಷ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿಯೇ, ಅವರೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿನ್ನೆ ನಡೆಯಬೇಕಿದ್ದ ಚುನಾವಣೆಗೆ ಸದಸ್ಯರ ಕೊರತೆಯಿದ್ದ ಕಾರಣ ಇಂದು ಚುನಾವಣೆಗೆ ನಿಗದಿ ಮಾಡಿತ್ತು. ನಾಮಪತ್ರ ಸಲ್ಲಿಸಿದ ಇಬ್ಬರೇ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೆಬ್ಬಳ್ಳಿ ಪಂಚಾಯತಿಗೆ ಅಧ್ಯಕ್ಷೆಯಾಗಿರುವ ತೇಜಸ್ವಿ ತಲವಾಯಿ, 94 ಬ್ಯಾಚಿನ ತಮ್ಮಾಜಿರಾವ ತಲವಾಯಿಯವರ ಧರ್ಮಪತ್ನಿಯಾಗಿದ್ದಾರೆ. ಸದಾಕಾಲ ಜನರ ನಡುವೆಯಿರುವ ತಮ್ಮಾಜಿರಾವ್ ಪತ್ನಿಯನ್ನ ಸಾರ್ವಜನಿಕ ಸೇವೆಯಲ್ಲಿ ಇರುವಂತೆ ನೋಡಿಕೊಂಡಿದ್ದು, ಹೆಮ್ಮೆಯ ವಿಷಯವಾಗಿದೆ.