ಧಾರವಾಡ ಬೇಂದ್ರೆ ಬಸ್‌ನಲ್ಲಿ ಮಹಿಳೆಗೆ “ಹೃದಯಾಘಾತ”- ಸೀಟ್‌ಲ್ಲಿ ಪ್ರಾಣಬಿಟ್ಟ ಮಹಿಳೆ….!!!

ಧಾರವಾಡ: ಕರ್ತವ್ಯ ನಿರ್ವಹಿಸಿ ಮನೆಗೆ ಹೊರಟಿದ್ದ ನೀರಾವರಿ ಇಲಾಖೆಯ ಸಿಬ್ಬಂದಿಯೋರ್ವರು ಬೇಂದ್ರೆ ಸಾರಿಗೆ ಬಸ್‌ನಲ್ಲಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಈಗಷ್ಟೇ ಸಂಭವಿಸಿದೆ.
ಮೃತ ಸರಕಾರಿ ನೌಕರಸ್ಥೆಯನ್ನ ಇಂದುಮತಿ ಕಾಂಬಳೆ ಎಂದು ಗುರುತಿಸಲಾಗಿದ್ದು, ಇವರು ನೀರಾವರಿ ನಿಗಮದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
Exclusive CCTV potages
https://www.facebook.com/share/v/15367H1yB4/
ಧಾರವಾಡದ ಜುಬಲಿ ವೃತ್ತದಿಂದ ಹತ್ತಿ ಹುಬ್ಬಳ್ಳಿಗೆ ಬರುವ ಮುನ್ನವೇ ದುರ್ಘಟನೆ ನಡೆದಿದ್ದು, ಕೋರ್ಟ್ ಸಮೀಪ ಬರುವಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ.
ಮೃತರ ಶವವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.