Posts Slider

Karnataka Voice

Latest Kannada News

ಹುಬ್ಬಳ್ಳಿ ರೇಲ್ವೆ ಬಾಂಬ್ ನಡೆದು ಬರೋಬ್ಬರಿ  1 ವರ್ಷ 2ದಿನ: ವರದಿಯೂ ಇಲ್ಲಾ.. ಆರೋಪಿಗಳ ಪತ್ತೆಯೂ ಇಲ್ಲಾ..

1 min read
Spread the love

ಹುಬ್ಬಳ್ಳಿ: ನೈರುತ್ಯ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಪೋಟಗೊಂಡು ಇಂದಿಗೆ ಒಂದು ವರ್ಷ ಎರಡು ದಿನಗಳು ಕಳೆದಿದೆ.‌ ಆದರೂ ಇಲ್ಲಿಯವರೆಗೆ ಯಾವುದೇ ಆರೋಪಿಗಳನ್ನ ಬಂಧಿಸಿಯೂ ಇಲ್ಲ. ಎಫ್ ಎಸ್ ಎಲ್ ವರದಿಯೂ ಬಂದಿಲ್ಲ.

2019ರ ಅಕ್ಟೋಬರ್ 21ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣ ಅಕ್ಷರಶಃ ನಡುಗಿ ಹೋಗಿತ್ತು. ಆ ಒಂದು ಸ್ಪೋಟ ಜನರಲ್ಲಿ ಭಯ ಸೃಷ್ಠಿ ಮಾಡಿತ್ತು. ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ ವಿಜಯವಾಡ ಎಕ್ಸ್ ಪ್ರೇಸ್ ರೈಲಿನಲ್ಲಿ ಸ್ಪೋಟಕ ತುಂಬಿದ್ದ ಬಾಕ್ಸ್ ಗಳನ್ನ ಈಡಲಾಗಿತ್ತು.ಅದರಲ್ಲಿ ಒಂದು ಬಾಕ್ಸ್ ತೆರೆಯುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿತ್ತು. ಒಂದು ಕ್ಷಣ ರೈಲ್ವೆ ನಿಲ್ದಾಣ ಅಲ್ಲೋಲ ಕಲ್ಲೋಲವಾಗಿತ್ತು. ಈ ಪ್ರಕರಣದ ತನಿಖೆಗಾಗಿ ನಾಲ್ಕು ತಂಡಗಳನ್ನ ರಚನೆ ಮಾಡಲಾಗಿತ್ತು. ಘಟನೆ ನಡೆದು ಒಂದು ವರ್ಷ ಕಳೆದರೂ ತನಿಖಾ ತಂಡಕ್ಕೆ ಒಂದೆ ಒಂದು ಸಣ್ಣ ಸುಳಿವು ಸಿಕ್ಕಿಲ್ಲ. ಬಾಕ್ಸ್ ಮೇಲಿದ್ದ ಕೊಲ್ಲಾಪುರ ಶಾಸಕರ ವಿಚಾರಣೆಯು ನಡೆದಿಲ್ಲ.

ಆತಂಕದ ವಿಚಾರ ಅಂದ್ರೆ, ಹುಬ್ಬಳ್ಳಿ ಸ್ಪೋಟಕ್ಕೂ ಎರಡು ದಿನ ಮೊದಲು ಕೊಲ್ಲಾಪುರದಲ್ಲಿಯೂ ಇದೇ ಮಾದರಿಯಲ್ಲೆ ಸ್ಫೋಟ ನಡೆದಿತ್ತು. ಈ ಎಲ್ಲಾ ಆಯಾಮಗಳ ಜೊತೆ ವಿಜಯವಾಡದಿಂದ ಹೊರಟಿದ್ದ ರೈಲ್ವೆಯಲ್ಲಿ ಸ್ಪೋಟಗೊಂಡ ಬಾಕ್ಸ್ ಇಟ್ಟಿದ್ದು ಯಾರು..? ಯಾವಾಗ..? ಎಲ್ಲಿ ಇಟ್ಟಿದ್ದರೆಂಬ ಅಂಶವನ್ನ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ದುರಂತದ ಸಂಗತಿ ಅಂದ್ರೆ ಸ್ಫೋಟದ ಮಾದರಿಗಳನ್ನ ಕಲೆ ಹಾಕಿಕೊಂಡು ಹೋಗಿರುವ ಎಫ್ ಎಸ್‌ ಎಲ್ ತಂಡ ಇದುವರೆಗೂ ವರದಿ ನೀಡಿಲ್ಲ.ಇದೆಲ್ಲ ನೋಡಿದ್ರೆ ಪ್ರಕರಣವನ್ನ ರಾಜ್ಯ ಹಾಗೂ ರೈಲ್ವೆ ಪೋಲಿಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ‌ರೈಲ್ವೆ ಹಾಗೂ ರಾಜ್ಯ ಪೋಲಿಸರ ನಡುವಿನ ಸಮನ್ವಯದ ಕೊರೆತೆಯೂ ಪ್ರಕರಣ ಹಳ್ಳ ಹಿಡಿಯಲು ಕಾರಣವಿರಬಹುದೆಂದು ಹೇಳಲಾಗುತ್ತಿದೆ.

ರೇಲ್ವೆ ನಿಲ್ದಾಣದಲ್ಲಿ ಸ್ಪೋಟಗೊಂಡು ಗಾಯಗೊಂಡಿದ್ದ ಯುವಕ ಕೂಡಾ ಅನಧಿಕೃತವಾಗಿ ಉಪಹಾರ ಕೊಡುವ ಯುವಕನಾಗಿದ್ದ. ಆತನನ್ನ ಬಳಕೆ ಮಾಡಿದ ಪೊಲೀಸರಿಗೂ ಏನೂ ಆಗಲಿಲ್ಲ ಎಂಬುದು ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *

You may have missed