Posts Slider

Karnataka Voice

Latest Kannada News

ಹಾನಗಲ್: ಅಂಗನವಾಡಿಯಲ್ಲಿ ಕಳಫೆ ಆಹಾರ: ಹೇಳೋರಿಲ್ಲ.. ಕೇಳೋರಿಲ್ಲ..

1 min read
Spread the love

ಹಾವೇರಿ: ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವುದನ್ನ ಅಂಗನವಾಡಿಗೆ ಆಹಾರ ವಿತರಣೆ ಮಾಡುವವರು ಮರೆತಂತಿದೆ. ಅದೇ ಕಾರಣಕ್ಕೆ ಕೊರೋನಾ ಸಮಯದಲ್ಲೂ ಕಳಫೆ ಆಹಾರವನ್ನ ವಿತರಣೆ ಮಾಡುತ್ತಿದ್ದಾರೆ.

ಕಳಫೆ ಆಹಾರ ವಿತರಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ತಾಲೂಕಿ ರತ್ನಾಪುರ ಗ್ರಾಮದಲ್ಲಿ ಪಾಲಕರು ಆಕ್ರೋಶವ್ಯಕ್ತಪಡಿಸಿದ್ದು, ಮೊಟ್ಟೆಗಳು ಸಂಪೂರ್ಣವಾಗಿ ಕೆಳದರ್ಜೆಯನ್ನ ಹೊಂದಿವೆ.

ಕಳಫೆ ಆಹಾರ ಒದಗಿಸುತ್ತಿರುವುದನ್ನ ಖಂಡಿಸಿರುವ ಪಾಲಕರು ಅಂಗನವಾಡಿ ಕಾರ್ತಕರ್ತರನ್ನ ಒಳಗಡೆ ಕೂಡಿ ಹಾಕಿದ್ದು, ತಹಶೀಲ್ದಾರರು ಬರುವವರೆಗೂ ಹೊರಗೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮಕ್ಕಳಿಗೆ ಕೊಡುವ ಆಹಾರದಲ್ಲೂ ಹಣ ಹೊಡೆಯುವುದನ್ನ ರೂಢಿಸಿಕೊಳ್ಳಲಾಗಿದೆ. ಇದೀಗ ಎಲ್ಲವೂ ಬಹಿರಂಗವಾಗಬೇಕೆಂದು ಪಾಲಕರು ಒತ್ತಾಯಿಸಿದರು.


Spread the love

Leave a Reply

Your email address will not be published. Required fields are marked *