Posts Slider

Karnataka Voice

Latest Kannada News

ಜಮೀನು ವಿಚಾರ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: ಬೆಚ್ಚಿಬೀಳಿಸುವ ಹೊಡೆದಾಟದ ದೃಶ್ಯ ಸೆರೆ

1 min read
Spread the love

ಕೋಲಾರ: ದೊಣ್ಣೆ, ರಾಡ್ ಗಳಲ್ಲಿ ಮಹಿಳೆಯರಿಗೆ ದೊಣ್ಣೆಗಳಿಂದ ಹಲ್ಲೆ ನಡೆಸಿರುವ ಘಟನೆ ಕೋಲಾರ ತಾಲೂಕಿನ ಹೊಳೇರಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಮೇ 15 ರಂದು ಬೆಳಗ್ಗೆ ಮಹಿಳೆಯರನ್ನ ಅಟ್ಟಾಡಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿರೊ ವಿಡೀಯೋ ವೈರಲ್ ಆಗಿದ್ದು, ಚಿಕ್ಕ ವೆಂಕಟೇಶಪ್ಪ ಮತ್ತು ಅಶೋಕ್ ಎನ್ನುವರ ಕುಟುಂಬದ ಮದ್ಯೆ ಗಲಾಟೆ ನಡೆದಿದೆ. ಇಬ್ಬರು ಮಹಿಳೆಯರ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಧಿಕಾರಿಗಳು ಸ್ಮಶಾನ ಜಾಗ ಸರ್ವೆ ನಡೆಸೊ ವೇಳೆ ಗಲಾಟೆಯಾಗಿದೆ. ಚಿಕ್ಕವೆಂಕಟೇಶಪ್ಪ ಎನ್ನುವರಿಗೆ ಎರಡೂ ಕೈ ಮುರಿತವಾಗಿವೆ. ಗಲಾಟೆಯಲ್ಲಿ ಅಶೋಕ್ ಎನ್ನುವರಿಗೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಗಲಾಟೆಯಲ್ಲಿ ಎರಡು ಕಡೆಯವ್ರ 15 ಕ್ಕು ಹೆಚ್ಚು ಜನರಿಗೆ ಗಾಯಗಳಾಗಿವೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು‌ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed