Posts Slider

Karnataka Voice

Latest Kannada News

ಕಲಬುರಗಿ  ಜಿಲ್ಲೆಗೆ 274 ಕೋಟಿ: ಗೋವಿಂದ ಕಾರಜೋಳ

1 min read
Spread the love

ಬೆಂಗಳೂರು: ಕಲಬುರಗಿ ಜಿಲ್ಲೆ ಅಭಿವೃದ್ಧಿಗೆ ಪೂರಕವಾಗಿ   ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಯೋಜನೆಯಡಿ 274.22 ಕೋಟಿ ರೂ ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ವಿಧಾನಸೌಧದಲ್ಲಿಂದು ನಡೆದ  ಕೆಕೆಆರ್‍ಡಿಬಿ ಯೋಜನೆಯ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಕ್ರೋ ಹಾಗೂ ಮ್ಯಾಕ್ರೋ ಉಪಯೋಜನೆಯಡಿ  ಸಾಮಾನ್ಯ ವರ್ಗಕ್ಕೆ 191.37 ಕೋಟಿ ರೂ, ಎಸ್‍ಸಿಪಿ ಉಪಯೋಜನೆಗೆ 77.30 ಕೋಟಿ ಹಾಗೂ ಟಿಎಸ್‍ಪಿ ಉಪಯೋಜನೆಯಡಿ 55.4 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ವಲಯಕ್ಕೆ  ಮೈಕ್ರೋ ಮತ್ತು ಮ್ಯಾಕ್ರೋ  ಉಪಯೋಜನೆಯಡಿ  ಸಾಮಾನ್ಯ ವರ್ಗಕ್ಕೆ 82.29 ಕೋಟಿ, ಎಸ್‍ಸಿಪಿ ಯೋಜನೆಯಡಿ 33.23 ಕೋಟಿ, ಟಿಎಸ್‍ಪಿ ಯೋಜನೆಯಡಿ 23.8 ಕೋಟಿ ರೂ. ವಿನಿಯೋಗಿಸಲಾಗುವುದು.  ಸಾಮಾಜಿಕೇತರ ವಲಯಕ್ಕೆ ಮೈಕ್ರೋ ಮತ್ತು ಮ್ಯಾಕ್ರೋ ಉಪಯೋಜನೆಯಡಿ   ಸಾಮಾನ್ಯ ವರ್ಗಕ್ಕೆ  109  ಕೋಟಿ, ಎಸ್‍ಸಿಪಿ ಉಪಯೋಜನೆಗೆ 44 ಕೋಟಿ ಹಾಗೂ ಟಿಎಸ್‍ಪಿ ಉಪಯೋಜನೆಗೆ 3.15 ಕೋಟಿ ರೂ. ಅನ್ನು ನಿಗಧಿಪಡಿಸಲಾಗಿದೆ. ಮಂಡಳಿಯ ನಿಯಮಾವಳಿಯಂತೆ  ವಲಯವಾರು  ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ಯೋಜನೆಗಳನ್ನು  ಸಮರ್ಪಕವಾಗಿ ಅನುಷ್ಟಾನಗೊಳಿಸುವ ಮೂಲಕ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು. ಫಲಾನುಭವಿಗಳು  ಯೋಜನೆಗಳ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.

ನಂತರ ಕಲಬುರಗಿ ಜಿಲ್ಲೆಯ ಖನಿಜ ಪ್ರತಿಷ್ಟಾನ ಟ್ರಸ್ಟ್ ಸಮಿತಿ ಸಭೆಯನ್ನು ನಡೆಸಿ, ಜಿಲ್ಲೆಯಲ್ಲಿ  ಪ್ರತ್ಯಕ್ಷ ಹಾಗೂ ಪರೋಕ್ಷ ಗಣಿ ಬಾದಿತ ಪ್ರದೇಶ ಅಭಿವೃದ್ದಿಗೆ ಡಿಎಂಎಫ್ ಅನುದಾನವನ್ನು ಬಳಕೆ ಮಾಡಬೇಕು ಎಂದು ಸೂಚಿಸಿದ ಅವರು, ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಜಿಲ್ಲಾಧಿಕಾರಿ ಶರತ್ ಸಭೆಯಲ್ಲಿ ವಿಷಯವಾರು ವಿಸ್ತೃತವಾಗಿ ವಿಷಯ ಮಂಡಿಸಿದರು.

ಸಭೆಯಲ್ಲಿ ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ಎಂ.ವೈ. ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ್ ಪಾಟೀಲ ತೆಲ್ಕೂರ, ಡಾ. ಅಜಯ ಸಿಂಗ್, ಪ್ರಿಯಾಂಕ ಖರ್ಗೆ, ಡಾ. ಸುಭಾಷ್ ಗುತ್ತೇದಾರ್, ಬಸವರಾಜ ಮತ್ತಿಮುಡ, ಖನಿಜ ಫಾತೀಮಾ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed