ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರಾಟ- ಮಹಿಳೆ ಸೇರಿ ಇಬ್ಬರ ಬಂಧನ..!

ಹುಬ್ಬಳ್ಳಿ: ನಗರದ ರೇಲ್ವೆ ನಿಲ್ದಾಣದ ರೈಲ್ವೆ ಪಾರ್ಸಲ್ ಕಚೇರಿಯ ಪಕ್ಕದಲ್ಲಿರುವ ಪಾರ್ಕ್ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ರೇಲ್ವೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರೇಲ್ವೆಯ ಪ್ರಯಾಣಿಕರಿಗೆ ಗಾಂಜಾ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆದಿದ್ದು, ಶಿವಮೊಗ್ಗ ವಿದ್ಯಾನಗರದ ನಿವಾಸಿ ಸಲ್ಮಾನ ಅಕ್ಮಲ್ ಹಾಗೂ ಹುಬ್ಬಳ್ಳಿ ಎಂ.ವಿ ಗಲ್ಲಿಯ ನಿವಾಸಿ ಸಾವಿತ್ರಿಬಾಯಿ ದಿಲೀಪ್ ಹಬೀಬ ಎಂಬುವವರನ್ನ ಬಂಧನ ಮಾಡಲಾಗಿದೆ.
ಬಂಧಿತ ಆರೋಪಿಗಳಿಂದ 8 ಸಾವಿರ ರೂಪಾಯಿ ಮೌಲ್ಯದ 800 ಗ್ರಾಂ ಗಾಂಜಾ ಹಾಗೂ 800 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಗಾಂಜಾವನ್ನ ಚೀಟಿಗಳಲ್ಲಿ ಕಟ್ಟಿ ಮಾರಾಟ ಮಾಡುತ್ತಿದ್ದರು.
ರೇಲ್ವೆ ಠಾಣೆ ಇನ್ಸಪೆಕ್ಟರ್ ಸತ್ಯಪ್ಪ ಎಂ ನೇತೃತ್ವದಲ್ಲಿ ಸಿಬ್ಬಂದಿಯವರಾದ ರಮೇಶ ಲಮಾಣಿ, ಸುಭಾಸ ದಳವಾಯಿ, ಯೂಸುಫ್ ನದಾಫ, ನೇತ್ರಾ ಕುಂದಗೋಳ, ಶೃತಿ ಭೀಮನಗೌಡರ ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.