ಮುತ್ತಪ್ಪ ರೈ ಅಂತ್ಯಕ್ರಿಯೆ ಸಮಯದಲ್ಲಿ ಗಾಳಿಯಲ್ಲಿ ಗುಂಡು: ಏಳು ಜನರ ಬಂಧನ

ರಾಮನಗರ: ಮುತ್ತಪ್ಪ ರೈ ಅಂತ್ಯ ಕ್ರಿಯೆಯ ಸಂದರ್ಭದಲ್ಲಿ ಅವರದ್ದೇ ಸೆಕ್ಯುರಿಟಿಯವರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಡದಿ ಠಾಣೆಯಲ್ಲಿ ಗುನ್ನೆ ಸಂಖ್ಯೆ 135/20 ರಲ್ಲಿ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಏಳು ಜನರನ್ನ ಬಂಧನ ಮಾಡಲಾಗಿದೆ.
ಅಂತ್ಯಕ್ರಿಯೆಯ ಉಸ್ತುವಾರಿ ನೋಡಿಕೊಂಡಿದ್ದ ಪ್ರಕಾಶ್ ಸೇರಿ ಏಳು ಜನರನ್ನು ಬಂಧನ ಮಾಡಲಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದಾಗ ಬಳಸಿದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿ ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಬಂಧಿತರನ್ನ ಮೋನಪ್ಪ, ಗಿರೀಶ್, ಲಕ್ವಿರ್ ಸಿಂಗ್, ಚಾತರ್ ಸಿಂಗ್, ರಂಜಿತ್ ರೈ, ಸುನೀಲ್ ಮತ್ತು ಪ್ರಕಾಶ್ ರೈ ಎಂದು ಗುರುತಿಸಲಾಗಿದೆ.