ಖೊಟ್ಟಿ ದಾಖಲೆ ಸೃಷ್ಠಿಸಿ ಕೋಟಿ ಕೋಟಿ ಲೂಟಿ- ನಿರಾಣಿ ಪಿಎ ಭಾಗಿ: ಬಸವರಾಜ ಕೊರವರ ಗಂಭೀರ ಆರೋಪ..!!

ಧಾರವಾಡ: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯಲ್ಲಿ ಐಐಟಿಗೆ ಸ್ವಾಧೀನಪಡಿಸಿಕೊಂಡ ಭೂಮಿಯ ಪರಿಹಾರದ ಹಣವನ್ನ ಖೊಟ್ಟಿ ದಾಖಲೆ ಸೃಷ್ಠಿಸಿ ಕೋಟ್ಯಾಂತರ ರೂಪಾಯಿ ಹಣವನ್ನ ಲೂಟಿ ಮಾಡಲಾಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದ್ದಾರೆ.
ಧಾರವಾಡದ ವಿಶೇಷ ಭೂಸ್ವಾಧೀನಾಕಾರಿ ವಿ.ಡಿ.ಸಜ್ಜನ ಏಪ್ರಿಲ್ 2021 ರಿಂದ ಏಪ್ರಿಲ್ 2022 ರ ವರೆಗೆ 140 ಕೋಟಿ ಅನುದಾನ ಬಿಡುಗಡೆ ಆಗಿದೆ. ಇದರಲ್ಲಿ ಸಿಇಓ ಎನ್.ಶಿವಶಂಕರ, ಕೈಗಾರಿಕಾ ಸಚಿವರ ಆಪ್ತ ಕಾರ್ಯದರ್ಶಿ ದಯಾನಂದ ಬಂಡಾರಿ, ದೊರೆಸ್ವಾಮಿ, ಶಂಕರ ತಳವಾರ, ಶಿಂಪಿ, ಅಮಿತ ಮುದ್ದಿ ಹಾಗೂ ರಾಜು ಹೆಬ್ಬಳ್ಳಿ ಎಂಬುವವರೇ ಸುಮಾರು 21 ಕೋಟಿ 14 ಲಕ್ಷ 78 ಸಾವಿರದಾ 468 ರೂಪಾಯಿ ವಂಚನೆ ನಡೆಸಲಾಗಿದೆ ಎಂದು ಆರೋಪಿಸಿದರು.
ಸತ್ತ ರೈತರ ಹೆಸರಿನಲ್ಲೂ ಹಣವನ್ನ ಹೊಡೆಯಲಾಗಿದೆ. ಹಣವನ್ನ ಹೊಡೆಯಲು ಹುಬ್ಬಳ್ಳಿಯ ಐಡಿಬಿಐ ಬ್ಯಾಂಕ್, ಕೋಟೂರಿನ ಬ್ಯಾಂಕ್ ಆಪ್ ಬರೋಡಾ ಸಾಥ್ ನೀಡಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಿಥುನ ಜಾಧವ, ವಕೀಲರಾದ ಐ.ಕೆ.ಧರಣಗೌಡರ, ಗುರು ಅಂಗಡಿ, ನಾಗರಾಜ ಕಿರಣಗಿ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.