ಕಲಬುರಗಿಯಲ್ಲಿ ಬೆಂಕಿಗೆ ಬಡವರ ಬದುಕು ಬೀದಿಗೆ
ಕಲಬುರಗಿ: ಆಕಸ್ಮಿಕವಾಗಿ ಒಂದು ಅಂಗಡಿಗೆ ತಗುಲಿದ ಬೆಂಕಿ ಪಕ್ಕದ ಅಂಗಡಿಗಳಿಗೂ ವ್ಯಾಪಿಸಿ ಮೂರು ಅಂಗಡಿಗಳು ಸುಟ್ಟು ಕರಕಲಾದ ಘಟನೆ ಕಲಬುರಗಿ ನಗರದ ಸೂಪರ್ ಮಾರುಕಟ್ಟೆಯ ಚಪ್ಪಲ್ ಬಜಾರ್ ನಲ್ಲಿ ಸಂಬವಿಸಿದೆ.
ಬೆಂಕಿಯು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿರೋ ಸಾಧ್ಯತೆಯಿದೆ ಎನ್ನಲಾಗಿದ್ದು, ಮೂರು ಚಪ್ಪಲಿ ಅಂಗಡಿಗಳಲ್ಲಿದ್ದ 10 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ರಾತ್ರಿ ಘಟನೆ ನಡೆದು ಮೂರು ಅಂಗಡಿಗಳಿಗೆ ವ್ಯಾಪಿಸಿದ ನಂತರ ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನ ನಂದಿಸಿದ್ದಾರೆ.
ಬೆಂಕಿಯು ಮೂರು ಅಂಗಡಿಗಳಿಗೆ ವ್ಯಾಪಿಸಿದ್ದರಿಂದ ಮತ್ತಷ್ಟು ಅಂಗಡಿಕಾರರು ಆತಂಕಗೊಂಡಿದ್ದರು. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.