Posts Slider

Karnataka Voice

Latest Kannada News

ಗಳಗಿಹುಲಕೊಪ್ಪದಲ್ಲಿ ಕೈ ಕೈ ಮಿಲಾಯಿಸಿದ ಹಾಲಿ-ಮಾಜಿ ಜಿಪಂ ಸದಸ್ಯರು- 84 ಲಕ್ಷಕ್ಕಾಗಿ ನಡೀಯಿತಾ..

1 min read
Spread the love

ಧಾರವಾಡ: ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಕೊರೋನಾ ಸಮಯದಲ್ಲಿಯೂ 84 ಲಕ್ಷ ರೂಪಾಯಿಯನ್ನ ತೆಗೆದ ಪ್ರಕರಣವೊಂದು ಹಾಲಿ-ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆದಿದೆ.

ಗಲಾಟೆಯ ದೃಶ್ಯ

14ನೇ ಹಣಕಾಸು ಯೋಜನೆಯಲ್ಲಿ 84 ಲಕ್ಷ ರೂಪಾಯಿಯನ್ನ ಕಾರ್ಯನಿರ್ವಹಿಸದೇ ಹಣವನ್ನನ ತೆಗೆಯಲಾಗಿದೆ. ಕೇವಲ 8 ಹೈ ಮಾಸ್ಕಗಳ ಬಿಲ್ ಮಾತ್ರಯಿದ್ದು, ಇನ್ನುಳಿದ ಹಣವನ್ನ ಕೊಟೇಷನ್ ಮೂಲಕ ತೆಗೆಯಲಾಗಿದೆ ಎಂದು ಗ್ರಾಮದ ಕೆಲವರು ದೂರಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಅಣ್ಣಪ್ಪ ದೇಸಾಯಿ, ಗ್ರಾಮ ಪಂಚಾಯತಿಗೆ ಬಂದಿದ್ದರು.

ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಮೊದಲೇ ದೂರು ನೀಡಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಷ್ಟರಲ್ಲೇ ಗ್ರಾಮ ಪಂಚಾಯತಿ ಪಿಡಿಓ ಮತ್ತು ಅಧ್ಯಕ್ಷರು ಸೇರಿಕೊಂಡು ಬಿಲ್ ಗಳನ್ನ ನಕಲಿ ಸೃಷ್ಟಿ ಮಾಡುತ್ತಿದ್ದರೆಂದು ದೂರಲಾಗಿದೆ.

ಈ ಎಲ್ಲ ಘಟನೆಗಳ ಬಗ್ಗೆ ಮಾತನಾಡುತ್ತಿದ್ದಾಗಲೇ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಿವಲಿಂಗ ಚಿಕ್ಕಣ್ಣನವರ, ಹಾಲಿ ಸದಸ್ಯ ಅಪ್ಪಣ್ಣ ದೇಸಾಯಿ ಕುರಿತು ಬೇರೆಯದ್ದೇ ವಿಷಯವನ್ನ ಮಾತನಾಡತೊಗಿದರು. ಆಗ ಏಕವಚನದಲ್ಲಿಯೇ ಕೆಟ್ಟದ್ದಾಗಿ ಮಾತನಾಡುತ್ತಲೇ, ದೇಸಾಯಿಯವರ ಮೇಲೆ ಚಿಕ್ಕಣ್ಣನವರ ಹೋಗುತ್ತಿದ್ದಾಗ ಅಲ್ಲಿದ್ದ ಕೆಲವರು ಸಮಾಧಾನಪಡಿಸಿದರು.

ಗಳಗಿಹುಲಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಇದೀಗ ಪಿಡಿಓ ಮುರಗೋಡ ಎಂಬುವವರಿದ್ದು, ಅಧ್ಯಕ್ಷೆ ರಾಜೇಶ್ವರಿ ಗಿರಿಯಾಲ ಎಂಬುವವರಿದ್ದಾರೆ. ಅಧ್ಯಕ್ಷೆ ರಾಜೇಶ್ವರಿ ಪತಿ ಸುರೇಶ ಗಿರಿಯಾಲ, ಶಿವಲಿಂಗ ಚಿಕ್ಕಣ್ಣನವರ ಆತ್ಮೀಯರಾಗಿದ್ದೇ ಇದಕ್ಕೇಲ್ಲ ಕಾರಣವೆನ್ನಲಾಗಿದೆ.

ಅವ್ಯವಹಾರ ತಡೆಯಲು ಮುಂದಾದ ಜಿಲ್ಲಾ ಪಂಚಾಯತಿ ಸದಸ್ಯನಿಗೆ ಗ್ರಾಮಸ್ಥರು ಸಾಥ್ ನೀಡಿದ್ದು, 84 ಲಕ್ಷ ರೂಪಾಯಿಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಈ ಅವ್ಯವಹಾರಕ್ಕೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ತಾರ್ಕಿಕ ಅಂತ್ಯ ಹಾಡಬೇಕಿದೆ. ಇಲ್ಲದಿದ್ದರೇ ಈ ಪ್ರಕರಣ ರಾಜಕೀಯಕ್ಕೆ ಬಳಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.


Spread the love

Leave a Reply

Your email address will not be published. Required fields are marked *