ನಿವೃತ್ತ ಪೊಲೀಸ್ ಕಮೀಷನರ್ ನಿಧನ
1 min readಬೆಂಗಳೂರು: ನಗರದ ನಿವೃತ್ತ ಪೊಲೀಸ್ ಆಯುಕ್ತ ಹಾಗೂ ಸಿಆರ್ ಪಿಎಫ್ ನ ಮಾಜಿ ಮಹಾನಿರ್ದೇಶಕರಾಗಿದ್ದ ಪಿ.ಜಿ.ಹಲವರನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಪಿ.ಜಿ.ಹಲವರನ್ ಅವರನ್ನ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲ ನೀಡದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರ ಇಚ್ಚೇಯಂತೆ ಅವರ ದೇಹವನ್ನ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದೆಂದು ಅವರ ಪುತ್ರ ಸಮರ್ ತಿಳಿಸಿದ್ದಾರೆ.
ಶೋಕ ಸಂದೇಶ
ಬೆಂಗಳೂರು ನಗರದ ಪೋಲಿಸ್ ಆಯುಕ್ತರಾಗಿ ದೀರ್ಘಾವಧಿ ಸೇವೆ ಸಲ್ಲಿಸಿದ್ದ ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ಪಿಜಿ ಹರ್ಲಂಕರ್ ಅವರ ನಿಧನದಿಂದ ನಾನು ನೊಂದಿದ್ದೇನೆ.
ಸ್ವಚ್ಛ ಮತ್ತು ಶುಭ್ರ ಆಡಳಿತಕ್ಕೆ ಹೆಸರಾಗಿದ್ದ ಹರ್ಲಂಕರ್ ಅವರು ಪೋಲಿಸ್ ಸಮವಸ್ತ್ರವನ್ನೇ ತಮ್ಮ ಧರ್ಮವನ್ನಾಗಿ ಸ್ವೀಕರಿಸಿ, ಕೆಲಸ ಮಾಡಿದ್ದರು.
ಅವರು ತಮ್ಮ ಮೃತ ದೇಹವನ್ನು ಚಿಕಿತ್ಸಾ ಉದ್ದೇಶಗಳಿಗಾಗಿ ಆಸ್ಪತ್ರೆಗೆ ದಾನಮಾಡಿ ಮಾದರಿಯಾಗಿದ್ದಾರೆ.
ಇವರ ಮೃತ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಗಲಿಕೆಯ ಶೋಕ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿ:
– ಶ್ರೀ ರಮೇಶ್ ಜಾರಕಿಹೊಳಿ.
ಜಲಸಂಪನ್ಮೂಲ ಸಚಿವರು