ಮಣಿಕಂಠನ ಹೆಸರಿನಲ್ಲಿ ಪರೀಕ್ಷೆ ಬರೆದ ಪೊಲೀಸ್ ಅಡಿವೆಪ್ಪ- ಗೋಕುಲ ಠಾಣೆಯಲ್ಲಿ…!

ಅಂಕಲಗಿ ಪೊಲೀಸ್ ಠಾಣೆಯ ಪೇದೆ ಅಡಿವೆಪ್ಪ ಪೊಲೀಸ್ ವಶದಲ್ಲಿ. ಸಿಪಿಸಿ 2146
ಹುಬ್ಬಳ್ಳಿ: ಅವಳಿನಗರದ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದ ಪೊಲೀಸ್ ಅರ್ಹತಾ ಪರೀಕ್ಷೆಯಲ್ಲಿ ಪೊಲೀಸ್ ಪೇದೆಯೋರ್ವ ಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಸಿಲುಕಿಕೊಂಡಿರುವ ಪ್ರಕರಣ ನಡೆದಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಗರದ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಪರೀಕ್ಷಾ ಕೇಂದ್ರದಲ್ಲಿ ಬೇರೆ ಅಭ್ಯರ್ಥಿಯ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಗೋಕಾಕ ತಾಲೂಕಿನ ಹಡಗಿನಹಾಳ ಗ್ರಾಮದ ಅಡಿವೆಪ್ಪ ಯರಗುಪ್ಪಿ, ಮಣಿಕಂಠ ಎಂಬ ಅಭ್ಯರ್ಥಿಯ ಹೆಸರಿನಲ್ಲಿ ಹಾಜರಾಗಿದ್ದನೆಂದು ಹೇಳಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ನೂತನವಾಗಿ ಅವಳಿನಗರಕ್ಕೆ ಆಗಮಿಸಿರುವ ಡಿಸಿಪಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಸುಮಾರು ಒಂದು ಗಂಟೆಯ ಹುಡುಕಾಟದ ನಂತರ ಸಿಕ್ಕಿಬಿದ್ದಿದ್ದಾನೆಂದು ಮೂಲಗಳು ತಿಳಿಸಿವೆ.
ಗೋಕುಲ ಠಾಣೆಯ ಇನ್ ಜಾರ್ಜ ಪಡೆದಿರುವ ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಸುರೇಶ ಕುಂಬಾರ ನೇತೃತ್ವದಲ್ಲಿ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸ್ ಅರ್ಹತಾ ಪರೀಕ್ಷೆಯಲ್ಲಿ ಬೇರೆ ಕ್ಯಾಂಡಿಟೇಟ್ ಹೆಸರಿನಲ್ಲಿ ಪೊಲೀಸನೋರ್ವ ಪರೀಕ್ಷೆ ಬರೆಯುತ್ತಿದ್ದಾನೆಂಬ ಮಾಹಿತಿ, ಡಿಸಿಪಿಯವರಿಗೆ ಲಭಿಸಿದ್ದು, ಆ ಆಧಾರದ ಮೇಲೆ ಡಿಸಿಪಿ ಕೆ.ರಾಮರಾಜನ ಸೂಚನೆ ನೀಡಿದ್ರು.
ಎರಡ್ಮೂರು ತಂಡಗಳು ಬೆಳಿಗ್ಗೆ ಪರೀಕ್ಷೆ ಆರಂಭವಾಗುತ್ತಿದ್ದಂತೆ ಹುಡುಕಾಟ ಆರಂಭಿಸಿ, ಕೊನೆಗೆ ನಕಲಿ ಕ್ಯಾಂಡಿಟೇಟ್ ನ ಅಸಲಿ ಬಣ್ಣವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ವಶದಲ್ಲಿರುವ ನಕಲಿ ಅಭ್ಯರ್ಥಿಯಾಗಿರುವ ಪೊಲೀಸ್ ನಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.