ಎಗ್ಗ್ ರೈಸ್ ಎಫೆಕ್ಟ್ ತರ್ಲಘಟ್ಟದ ಬಸವರಾಜ ಆಸ್ಪತ್ರೆ ಪಾಲು..!

ಹುಬ್ಬಳ್ಳಿ: ರಾತ್ರಿಯಾದರೇ ಸಾಕು ಎಗ್ ರೈಸ್ ತಿನ್ನುವ ಖಯಾಲಿ ಹೊಂದಿರುವ ಸಂಖ್ಯೆ ಹೆಚ್ಚಾಗುತ್ತಿರುವ ಸಮಯದಲ್ಲೇ ಎಗ್ ರೈಸ್ ತಿಂದು ತೀವ್ರ ಅಸ್ವಸ್ಥಗೊಂಡ ವ್ಯಕ್ತಿಯೋರ್ವ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದ ಬಸವರಾಜ ಎಂಬ ವ್ಯಕ್ತಿಯೇ ವಿಷಪೂರಿತ ಆಹಾರವನ್ನು ಸೇವಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ನಿನ್ನೇ ತಡರಾತ್ರಿಯಲ್ಲಿ ತಮ್ಮದೇ ಗ್ರಾಮದಲ್ಲಿ ಎಗ್ಗ್ ರೈಸ್ ಸೇವನೆ ಮಾಡಿದ್ದಾನೆ. ಎಗ್ಗ್ ರೈಸ್ ನಲ್ಲಿ ಟೆಸ್ಟಿಂಗ್ ಪೌಡರ್ ಜಾಸ್ತಿಯಾದ ಪರಿಣಾಮ ಈ ರೀತಿಯಾಗಿದೆ ಎಂದು ಹೇಳಲಾಗುತ್ತಿದೆ. ಬಸವರಾಜ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆಹಾರದಲ್ಲಿ ಏರುಪೇರಾಗಿದ್ದರಿಂದ ಮಡದಿಯೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಸವರಾಜನಿಗೆ ಬಂದೊದಗಿದೆ.