ಇಬ್ರಾಹಿಂಪುರದಲ್ಲಿ DSS ಪುನರ್ ಚೇತನ-ಧರ್ಮಣ್ಣ ದೊಡಮನಿ ಆಯ್ಕೆ
ಧಾರವಾಡ: ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಾಖೆಯ ಪುನರ್ ಚೇತನ ಕಾರ್ಯಕ್ರಮ ನಡೆಸಲಾಯಿತು.
ಇದೇ ಸಮಯದಲ್ಲಿ ಅಣ್ಣಿಗೇರಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಇಬ್ರಾಹಿಂಪುರ ವತಿಯಿಂದ ಮಹಾನಾಯಕ ಧಾರಾವಾಹಿ ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯವರಿಗೆ ಅಭಿನಂದನೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.
ಅಣ್ಣಿಗೇರಿ ತಾಲೂಕು ಸಂಚಾಲಕ ಕುಮಾರ್ ಸೈದಾಪುರ, ನವಲಗುಂದ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಮಹಿಳಾ ಸಂಚಾಲಕಿ ಮಂಜುಳಾ ಹೊಸಮನಿ, ಸಂಘಟನಾ ಸಂಚಾಲಕ ಯಲ್ಲಪ್ಪ ಮಾದರ, ಯಲ್ಲಪ್ಪ ಮಣ್ಣನವರ್, ದಿಲೀಪ್ ರತ್ನಾಕರ್, ಗಣೇಶ್ ಹುಣಸಿಮರದ, ಮಲ್ಲಿಕಾರ್ಜುನ ಚಿಕಾಡಿ, ರಾಜು ಮುಂದಿನಮನಿ, ಸಿದ್ದಪ್ಪ ಮುಂದಿನಮನಿ, ವಿನಾಯಕ ಹಾಗೂ ಓಣಿಯ ಗುರು ಹಿರಿಯರು ಉಪಸ್ಥಿತರಿದ್ದರು.
ಇಬ್ರಾಹಿಂಪುರ ಗ್ರಾಮ ಸಂಚಾಲಕರಾಗಿ ಧರ್ಮಣ್ಣ ದೊಡಮನಿ ಆಯ್ಕೆಯಾಗಿದ್ದಾರೆ. ಸಮಿತಿಯಿಂದ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಮುನ್ನಡೆಯುತ್ತಿರುವುದು ಎಲ್ಲರಿಗೂ ಸಂತಸವನ್ನ ಮೂಡಿಸಿದೆ.