ಧಾರವಾಡ ಡಿಸಿಐಬಿ DYSP ರಾಮನಗೌಡ ಹಟ್ಟಿ ವರ್ಗಾವಣೆ: 25 ಡಿಎಸ್ಪಿಗಳ ವರ್ಗಾವಣೆ

ಬೆಂಗಳೂರು: ರಾಜ್ಯದ ವಿವಿಧೆಡೆ 25 ಡಿವೈಎಸ್ಪಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಧಾರವಾಡ ಜಿಲ್ಲೆಯಲ್ಲೂ ಓರ್ವ ಡಿಎಸ್ಪಿಯವರ ವರ್ಗಾವಣೆ ಆಗಿದೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿನ ಡಿಸಿಐಬಿ ವಿಭಾಗದಲ್ಲಿದ್ದ ಡಿವೈಎಸ್ಪಿ ರಾಮನಗೌಡ ಹಟ್ಟಿಯವರ ವರ್ಗಾವಣೆ, ಬೆಳಗಾವಿ ಜಿಲ್ಲೆಯ ರಾಮದುರ್ಗ ಉಪವಿಭಾಗಕ್ಕೆ ವರ್ಗಾವಣೆಯಾಗಿದೆ.
ಪ್ರೋಬೇಷನರಿ ಹುದ್ದೆಯಲ್ಲಿದ್ದ ಶಿವಾನಂದ ಕಟಗಿಯವರನ್ನ ಬೈಲಹೊಂಗಲ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ರಾಜ್ಯ ಗುಪ್ತ ವಾರ್ತೆಯಲ್ಲಿದ್ದ ಶ್ರೀಧರ ದೊಡ್ಡಿಯವರ ವರ್ಗಾವಣೆ ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗಕ್ಕೆ ವರ್ಗಾವಣೆ ಮಾಡಿ, ಆದೇಶ ಹೊರಡಿಸಲಾಗಿದೆ.