ರವಿಚಂದ್ರನ್ ಟ್ರೀಕ್ಸ್ ವರ್ಕೌಟ್: ದೃಶ್ಯಂ ಆಗದ ರಿಯಲ್ ಸ್ಟೋರಿ
ಮೈಸೂರು: ಇದು ಕಥೆಯಲ್ಲ ರಿಯಲ್ ಸ್ಟೋರಿ. ಸಿನೇಮಾದ ಎಳೆಯನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಕೊಲೆ ಮಾಡಿದ್ದ ಜೋಡಿಯೊಂದನ್ನ ಪೊಲೀಸರು ಹೆಡಮುರಿಗೆ ಕಟ್ಟಿರುವ ಘಟನೆ ಜಿಲ್ಲೆಯ ಕೆ.ಆರ್.ನಗರದ ಸಾಲಿಗ್ರಾಮದಲ್ಲಿ ನಡೆದಿದೆ.
ಅಸಲಿಗೆ ಆಗಿದ್ದೀಷ್ಟೇ:- ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಪತಿಯನ್ನ ಪ್ರಿಯಕರನ ಮೂಲಕ ಪತ್ನಿ ಕೊಲೆ ಮಾಡಿಸಿದ್ದಳು. ಇದಕ್ಕೆ ಕಾರಣವಾಗಿದ್ದು ಅಕ್ರಮ ಸಂಬಂಧ. ತನ್ನ ಅಕ್ರಮಕ್ಕೆ ಅಡ್ಡಿಯಾದ ಪತಿಯನ್ನ ಪ್ರಿಯಕರನ ಜೊತೆ ಸೇರಿ ಮುಗಿಸಿದ್ದಳು.
ಕೊಲೆ ಆರೋಪಿಗಳಾದ ಬಾಬು ಹಾಗೂ ಶಾರದ ಅರೆಸ್ಟ್
ಪ್ರಿಯಕರನ ಜೊತೆ ಸೇರಿ ಪತಿ ಆನಂದನನ್ನ ಕೊಲೆ ಮಾಡಿಸಿದ ಪತ್ನಿ ಶಾರದ.
ಜೂನ್ 23 ರಂದು ಸಾಲಿಗ್ರಾಮದ ಚುಂಚನಕಟ್ಟೆ ಮುಖ್ಯ ರಸ್ತೆ ಬಳಿ ಆನಂದನ ಮೃತ ದೇಹ ಪತ್ತೆಯಾಗಿತ್ತು.
ಅಪಘಾತದಲ್ಲಿ ಮೃತಪಟ್ಟಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸಾಲಿಗ್ರಾಮ ಪೊಲೀಸರು. ಪತ್ನಿ ಶಾರದಾಳನ್ನ ವಿಚಾರಣೆಗೆ ಒಳಪಡಿಸಿದಾಗ ಸಂಚು ಬಯಲು. ಹಲವು ದಿನಗಳಿಂದ ಪ್ರಿಯಕರ ಬಾಬು ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದ ಶಾರದ.
ಪತಿಯನ್ನ ಮುಗಿಸಲು ಶಾರದ ಸ್ಕೆಚ್. ಪತಿಯನ್ನ ಮುಗಿಸಲು ಪ್ರಿಯಕರನ ಮೊರೆ ಹೋದ ಶಾರದ.
ದೃಶ್ಯಂ ಸಿನಿಮಾ ಪ್ರೇರಣೆಯಿಂದ ಪ್ಲಾನ್ ಸಿದ್ದಪಡಿಸಿದ ಆರೋಪಿಗಳು
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆನಂದ್ ನ ಕೊಲೆ ಮಾಡಿ ಮೃತದೇಹವನ್ನ ರಸ್ತೆ ಬದಿ ಬಿಸಾಡಿದ್ದ ಆರೋಪಿಗಳು.
ಅಪಘಾತದಲ್ಲಿ ಮೃತಪಟ್ಟಂತೆ ಆರೋಪಗಳಿಂದ ಸನ್ನಿವೇಶ ಸೃಷ್ಟಿ
ಪೊಲೀಸರ ಅತಿಥಿಯಾದ ಆರೋಪಿಗಳು.