ಡಾ.ಕೆ.ಎಸ್.ಶರ್ಮಾ ನೇತೃತ್ವದ ಟೀಂನಲ್ಲಿ ಸಿದ್ಧು ಹುಬ್ಬಳ್ಳಿ
1 min readಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಅನೇಕ ಹೋರಾಟದಲ್ಲಿ ಭಾಗವಹಿಸಿ, ಪತ್ರ ಚಳುವಳಿಯಲ್ಲಿ ಭಾಗವಹಿಸಿದ್ದವರೇ ಇಂದು ಕಣದಲ್ಲಿದ್ದಾರೆ
ಹುಬ್ಬಳ್ಳಿ: ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆಗಳು ನಡೆದಿದ್ದು, ಇದರಲ್ಲಿ ಡಾ.ಕೆ.ಎಸ್.ಶರ್ಮಾ ನೇತೃತ್ವದ ತಂಡ ಬಿರುಸಾಗಿ ಪ್ರಚಾರ ನಡೆಸುತ್ತಿದೆ.
ಮಹಾಮಂಡಳದ 19 ಅಭ್ಯರ್ಥಿಗಳು ಕಣದಲ್ಲಿದ್ದು ಹುಬ್ಬಳ್ಳಿ ಗ್ರಾಮಾಂತರ ಘಟಕ-2ರ ನಿರ್ವಾಹಕ ಸಿದ್ಧು ಬಿ. ಹುಬ್ಬಳ್ಳಿ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನೌಕರರ ಹಿತದೃಷ್ಟಿಯಿಂದ ನಡೆಯುವ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆದಿದ್ದು, ಡಾ.ಕೆ.ಎಸ್.ಶರ್ಮಾ ನೇತೃತ್ವದ ತಂಡ ಮುಂಚೂಣಿಯಲ್ಲಿದೆ.
19 ಅಭ್ಯರ್ಥಿಗಳು ಕೂಡಾ, ಸಾರಿಗೆ ಇಲಾಖೆಯ ನೌಕರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಯಾವುದೇ ತೊಂದರೆ ಬಂದರೂ ಹೆಗಲು ಕೊಡಲು ಸಿದ್ಧವಾಗಿರುವ ತಂಡ ಚುನಾವಣೆ ಎದುರಿಸುತ್ತಿದ್ದು, ಮತದಾರರು ಕೂಡಾ, ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ.