ಶ್ರೀಮುರುಳಿ ‘ಕಂಠಿ’ ಸಿನೇಮಾದ ನಿರ್ದೇಶಕ ಇನ್ನಿಲ್ಲ
1 min readಬೆಂಗಳೂರು: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಮುರುಳಿ ಅಭಿನಯದ ಕಂಠಿ ಸಿನೇಮಾದ ನಿರ್ದೇಶಕ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ.
ಕನ್ನಡದ ಖ್ಯಾತ ನಿರ್ದೇಶಕ 45 ವರ್ಷದ ಭರತ ಹಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ.
ಶ್ರೀಮುರುಳಿ ರಮ್ಯ ಅಭಿನಯದ ಕಂಠಿ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಆರಂಭವಾಗುವ ಲವ್ ಸ್ಟೋರಿಯನ್ನ ಹೊಂದಿತ್ತು. ಆ ಸಿನೇಮಾದಿಂದ ಸಾಕಷ್ಟು ಯಶಸ್ವಿ ನಿರ್ದೇಶಕ ಭರತ ಅವರು, ರವಿಚಂದ್ರನ ಪುತ್ರ ಮನೋರಂಜನ ಹಾಗೂ ಶಾನ್ವಿ ಶ್ರೀವಾಸ್ತವ ನಟಿಸಿದ್ದ ಸಾಹೇಬ ಸಿನೇಮಾಗೂ ಆ್ಯಕ್ಷನ್ ಕಟ್ ಹೇಳಿದ್ದರು.
ಪ್ರತಿಭಾನ್ವಿತ ನಿರ್ದೇಶಕ ನಿಧನರಾಗಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ನಿರ್ದೇಶಕ ಭರತರ ಆತ್ಮಕ್ಕೆ ಶಾಂತಿ ಕೋರಿರುವ ಚಿತ್ರರಂಗ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.