ಧಾರವಾಡ- “ಪರೀಕ್ಷೇ ಐತೀ ಓದ್ಕೋರೋ” ಅಂದ ಮಾವನಿಗೆ 10th ಕ್ಲಾಸ್ ಅಳಿಯನಿಂದ ಚಾಕು ಇರಿತ….

*Exclusive*
ಬುದ್ದಿ ಹೇಳಿದ ಮಾವನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ 14 ವರ್ಷದ ಅಳಿಯ
ಹುಬ್ಬಳ್ಳಿ: ಮಾವ ಬುದ್ದಿವಾದ ಹೇಳಿದಕ್ಕೆ ಅಳಿಯನೊಬ್ಬ ಸ್ವಂತ ಮಾವನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ವಿದ್ಯಾಕಾಶಿ ಎಂಬ ಹಣೆಪಟ್ಟವನ್ನು ಹೊತ್ತ ಧಾರವಾಡದಲ್ಲಿ ನಡೆದಿದೆ. ಅಳಿಯನಿಂದ ಗಾಯಗೊಂಡ ಮಾವ ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವೀಡಿಯೋ…
ಧಾರವಾಡದ ಆಂಜನೇಯ ನಗರದ 35 ವರ್ಷದ ಅಶೋಕ ಬಂಡಿವಡ್ಡರ ಎಂಬಾತ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ 14 ವರ್ಷದ ಅಳಿಯನಾದ ಈಶ್ವರ್ ಎಂಬಾತನಿಗೆ ಎರಡು ಹೊಡೆದು ಬುದ್ದಿ ಹೇಳಿದಕ್ಕೆ ಸಿಟ್ಟಿಗೆದ್ದ ಈಶ್ವರ್, ಮಾವ ಫೋನಿನಲ್ಲಿ ಮಾತನಾಡುತ್ತಿದ್ದಾಗ ಹಿಂಬದಿಯಿಂದ ಬೆನ್ನಿಗೆ ಚಾಕು ಇರಿದ ಪರಿಣಾಮ ಅಶೋಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಶೋಕನನ್ನು ಸ್ಥಳೀಯರ ಸಹಾಯದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.