ಧಾರವಾಡದಲ್ಲಿ ನಡೆದಿತ್ತು ಸಾಮೂಹಿಕ ಅತ್ಯಾಚಾರ- ಕೇಸ್ ದಾಖಲು ಮಾಡಲೇ ಇಲ್ಲಾ…!
1 min readಧಾರವಾಡ: ಇದು ವಿದ್ಯಾನಗರಿ ಧಾರವಾಡದಲ್ಲಿ ನಡೆದ ಅಸಹ್ಯಕರ ಘಟನೆ. ಇಲ್ಲಿ ಆಗಿರುವ ಬಹುದೊಡ್ಡ ಪ್ರಕರಣವೊಂದನ್ನ ಯಾರಿಗೂ ಗೊತ್ತಾಗದ ಹಾಗೇ ಮುಚ್ಚಿ ಹಾಕಲಾಗಿದೆ. ಇಡೀ ರಾಜ್ಯವೇ ಮರುಕಪಡುವಂತ ಘಟನೆ ನಡೆದರೂ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಎಲ್ಲವೂ ಗೊತ್ತಿದ್ದು ಸುಮ್ಮನಾಗಿರುವುದನ್ನೇ ಕರ್ನಾಟಕವಾಯ್ಸ್.ಕಾಂ ಹೊರ ಹಾಕುತ್ತಿದೆ.
ಅವತ್ತು ಬಾಗಲಕೋಟೆಯಿಂದ ಬಾಯಿಯಿಲ್ಲದ ಮಾನಸಿಕವಾಗಿ ನೊಂದಯೋರ್ವಳು ಧಾರವಾಡಕ್ಕೆ ಬಂದಿದ್ದಳು. ಆಟೋದಲ್ಲಿ ಆಕೆಯನ್ನ ಹತ್ತಿಸಿಕೊಂಡ ಕಿರಾತಕ ಪಡೆಯ ಮೂವರು, ಆಕೆಯನ್ನ ಅತ್ಯಾಚಾರ ಮಾಡಿದ್ದಾರೆ. ಸ್ವತಃ ಆಕೆಯೇ ಪೊಲೀಸ್ ಠಾಣೆಯೊಂದರ ಹಿರಿಯ ಅಧಿಕಾರಿಯ ಬಳಿಗೆ ತನಗಾಗಿರುವ ಅನ್ಯಾಯವನ್ನ ಹೇಳಿಕೊಂಡಿದ್ದಾಳೆ.
ಬರೋಬ್ಬರಿ ರಾತ್ರಿ 12.30ರ ವರೆಗೆ ಅತ್ಯಾಚಾರವಾದ ಯುವತಿಯನ್ನೇ ಬೆದರಿಸಿ ಕಳಿಸಿದ ಕೀರ್ತಿ ಮಹಾನ್ ಹಿರಿಯ ಅಧಿಕಾರಿಯೊಬ್ಬರು ಮಾಡಿದ್ದಾರೆ. ಘಟನೆ ನಡೆದಿದ್ದರ ಬಗ್ಗೆ ಗೊತ್ತಿದ್ದು ಹಾಗೇ ಮಾಡಲಾಗಿದೆ ಎಂಬುದು ಸಮಾಜದ ಏಳಿಗೆ ಬಯಸುವವರ ಹೇಳಿಕೆಯಾಗಿದೆ.
ಆಕೆಯನ್ನ ಮೂವರು ದುಷ್ಟರು ಕೂಡಿಕೊಂಡು ಅತ್ಯಾಚಾರ ಮಾಡಿದ್ದು, ಮತ್ತು ಆಕೆಗೆ ನೀಡಿರುವ ಹಿಂಸೆಯ ಬಗ್ಗೆ ಧಾರವಾಡದ ಠಾಣೆಯಲ್ಲಿ ಕರೆಸಿಕೊಂಡ ಆಟೋ ಚಾಲಕನೋರ್ವ ಹೇಳಿಕೊಂಡಿದ್ದ. ಆದರೂ, ಅವರೆಲ್ಲರನ್ನೂ ಬಿಟ್ಟು ಕಳಿಸಲಾಗಿದೆ. ಪ್ರಕರಣ ಮುಚ್ಚಿ ಹಾಕುವುದಷ್ಟೇ ಅಲ್ಲ, ಯುವತಿಯನ್ನ ಬೆದರಿಸಿ, ಮತ್ತೆ ಧಾರವಾಡದತ್ತ ಬರದಂತೆ ಬಾಗಲಕೋಟೆಯತ್ತ ಸಾಗ ಹಾಕಲಾಗಿದೆ.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯು ಪರಿಶಿಷ್ಟ ಪಂಗಡದಳೆಂಬ ಕಾರಣಕ್ಕೆ ಹೀಗೆ ಮಾಡಲಾಯಿತಾ ಎಂಬ ಸಂಶಯ ಮೂಡಿದ್ದು, ಅಂದು ಯುವತಿಯನ್ನ ಠಾಣೆಗೆ ಕರೆದುಕೊಂಡು ಹೋದವರೀಗ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ.
ದಕ್ಷ ಅಧಿಕಾರಿ ಲಾಬುರಾಮ್ ಅವರು ಈ ಪ್ರಕರಣವನ್ನ ಭೇದಿಸಬೇಕಿದೆ. ನೊಂದ ಯುವತಿಗೆ ನ್ಯಾಯ ಕೊಡಿಸುವ ಜೊತೆಗೆ ಮೂವರು ಅತ್ಯಾಚಾರಿಗಳನ್ನ ಬಂಧನ ಮಾಡಿಸಿ, ಪರಿಶಿಷ್ಟ ಪಂಗಡದ ಯುವತಿಗೆ ನ್ಯಾಯ ಕೊಡಿಸಬೇಕಿದೆ. ಪ್ರಕರಣ ದಾಖಲು ಮಾಡದೇ, ತಮ್ಮ ಕರ್ತವ್ಯಲೋಪ ಮಾಡಿರುವ ‘420’ ಅಧಿಕಾರಿಯ ವಿರುದ್ಧ ಕ್ರಮವನ್ನ ಜರುಗಿಸಬೇಕಿದೆ. ಅದನ್ನ ಮಾಡ್ತಾರಾ ಪೊಲೀಸ್ ಕಮೀಷನರ್.. ಕಾಲವೇ ಉತ್ತರ ಕೊಡಬೇಕಿದೆ.
ಈ ಘಟನೆಯ ಇಂಚಿಂಚೂ ಮಾಹಿತಿಯನ್ನ ಪ್ರತಿದಿನವೂ ಕರ್ನಾಟಕವಾಯ್ಸ್.ಕಾಂ ಹೊರಗೆ ಹಾಕತ್ತೆ. ಅಷ್ಟೇ ಅಲ್ಲ, ನೀಚರನ್ನ ಬಂಧನ ಮಾಡುವವರೆಗೆ ಜನರಿಗೆ ಈ ಪ್ರಕರಣದ ಸತ್ಯಾಸತ್ಯತೆಯನ್ನ ತಿಳಿಸುತ್ತಿರತ್ತೆ..