Posts Slider

Karnataka Voice

Latest Kannada News

ಧಾರವಾಡದ ಮದಿಹಾಳ, ಎಂಆರ್ ನಗರದಲ್ಲಿ ಕಳ್ಳತನ…!

1 min read
Spread the love

ಧಾರವಾಡ: ನಗರದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಸರಣೆ ಕಳ್ಳತನ ಪ್ರಕರಣ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ಮದಿಹಾಳ ಪ್ರದೇಶದಲ್ಲಿ ಮೂರು ಮನೆಗಳನ್ನ ಹಾಗೂ ಧಾರವಾಡದ ಎಂ.ಆರ್.ನಗರದ 7ನೇ ಕ್ರಾಸ್ ನಲ್ಲಿ ಒಂದು ಮನೆಯನ್ನ ಕಳ್ಳತನ ಮಾಡಲಾಗಿದೆ.

ಮದಿಹಾಳದಲ್ಲಿನ ಅಸ್ಲಂ ಮುಲ್ಲಾ ಎಂಬುವವರ ಮನೆಯಲ್ಲಿ ಐದೂವರೆ ತೊಲೆ ಬಂಗಾರದ 2 ನಕ್ಲೇಸ್, ನಾಲ್ಕಾಣೆ ತೂಕದ ಆರು ಉಂಗುರ, ಚಿನ್ನದ ಬೋರಮಾಳ ಸರ್, ಜುಮಕಿ, ಸಣ್ಣ ಮಕ್ಕಳ ಉಂಗುರ, 20 ಸಾವಿರ ರೂಪಾಯಿ ನಗದು ಸೇರಿದಂತೆ ಬೆಳ್ಳಿಯ ಆಭರಣಗಳನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ಕಳೆದ ಐದಾರೂ ದಿನದ ಹಿಂದೆ ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಸರಣಿ ಕಳ್ಳತನ ನಡೆದಿತ್ತು. ಇದಾದ ನಂತರವೂ ಮತ್ತೆ ಶಹರ ಠಾಣೆ ವ್ಯಾಪ್ತಿಯಲ್ಲಿಯೇ ಕಳ್ಳತನ ನಡೆದಿದೆ.

ಗಂಗವ್ವ ಮುದಕಣ್ಣನವರ, ಆರ್ಯ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೊಂಚು ಹಾಕಿ ಕಳ್ಳತನ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *

You may have missed