ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯರ ಸದಸ್ಯತ್ವ ರದ್ದು ಪ್ರಕರಣ: ಹೈಕೋರ್ಟನಿಂದ ತಡೆಯಾಜ್ಞೆ
ಧಾರವಾಡ: ಬಿಜೆಪಿಯ ನಾಲ್ವರು ಸದಸ್ಯರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿಯ ಮನವಿಯನ್ನ ಪುರಸ್ಕರಿಸಿದ್ದ ಚುನಾವಣಾ ಆಯೋಗ ಜಿಲ್ಲಾ ಪಂಚಾಯತಿಯ ನಾಲ್ವರು ಸದಸ್ಯರ ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಳೆದ ಹನ್ನೆರಡು ದಿನದ ಹಿಂದಷ್ಟೇ ನಾಲ್ವರು ಸದಸ್ಯರ ಸದಸ್ಯತ್ವ ಅಮಾನತ್ತು ಮಾಡಿದ್ದ ಚುನಾವಣಾ ಆಯೋಗ. ಆಯೋಗದ ನಿರ್ಧಾರ ವಿರೋಧಿಸಿ ನ್ಯಾಯಾಲಯದ ಮೊರೆ ನಾಲ್ವರು ಸದಸ್ಯರು. ಸದಸ್ಯರ ಕೋರಿಕೆಗೆ ತಡೆಯಾಜ್ಞೆ ನೀಡಿದ ಧಾರವಾಡ ಹೈಕೋರ್ಟ್. ಬಿಜೆಪಿಯ ನಾಲ್ವರು ಸದಸ್ಯರಾದ ರತ್ನಾ ಪಾಟೀಲ, ಅಣ್ಣಪ್ಪ ದೇಸಾಯಿ, ಮಂಜವ್ವ ಹರಿಜನ ಮತ್ತು ಜ್ಯೋತಿ ಬೆಂತೂರ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿ, ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷೆ ಚೈತ್ರಾ ಶಿರೂರ ಅವರನ್ನ ಕೆಳಗಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ ಜಿಲ್ಲಾ ಘಟಕ.
ಸದಸ್ಯತ್ವ ರದ್ದಾದ ನಂತರ ಮುಂದೇನು ಎಂಬ ಪ್ರಶ್ನೆ ಮೂಡುವ ಮುನ್ನವೇ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಹಾಲಿ ಸದಸ್ಯರು ನಿರಾಂತಕವಾಗಿದ್ದಾರೆ.
ಭಾರತೀಯ ಜನತಾ ಪಕ್ಷದಿಂದ ಚುನಾಯಿತರಾಗಿದ್ದ ನಾಲ್ವರು ಬಿಜೆಪಿ ಸದಸ್ಯರು, ತಮ್ಮದೇ ಪಕ್ಷದ ಅಧ್ಯಕ್ಷೆ ವಿರುದ್ಧ ಮತ ಚಲಾವಣೆ ಮಾಡಿದ್ದರು.