ಧಾರವಾಡದ “ರಿಯಲ್ ಸಿಂಗಂ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ”- ಹೊಸ ರೀತಿಯ ಕೇಸ್ ಟ್ರೇಸ್…!!!
1 min readಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಹೆಚ್ಚುತ್ತಿರುವ ಗಾಂಜಾ ಸೇವನೆಯ ಹಿಂದಿರುವ ಪೆಡ್ಲರ್‌ನ ಕಹಿಸತ್ಯವನ್ನ ಪತ್ತೆ ಹಚ್ಚುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ಯಶಸ್ವಿಯಾಗಿದ್ದಾರೆ.
ಧಾರವಾಡದ ಇರಾನಿ ಗ್ಯಾಂಗ್‌ನ ಹಲವರು ಮಹಾರಾಷ್ಟ್ರದ ಸಾಂಗ್ಲಿ ಕಡೆಯಿಂದ ಬರುವ ರೈಲಿನಲ್ಲಿ ಗಾಂಜಾ ತಂದು ಧಾರವಾಡದಲ್ಲಿ ಮಾರಾಟ ಮಾಡುತ್ತಾರೆಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ.
ಈ ಸಮಯದಲ್ಲಿ ರೈಲಿನಿಂದ ಬೇರೆ ಕಡೆ ಒಗೆಯುವ ಮತ್ತು ಅದೇ ಜಾಗದಿಂದ ಬೇರೆ ಕಡೆ ಸ್ಥಳಾಂತರ ಮಾಡುವ ಆರೋಪಿ ಮೊಹ್ಮದಲಿ ಫಿರೋಜ್ ಇರಾನಿ ಎಂಬಾತನನ್ನ ಹೆಡಮುರಿಗೆ ಕಟ್ಡಲಾಗಿದೆ. ಆರೋಪಿಯಿಂದ 250 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ರೈಲಿನಲ್ಲಿ ಬರುವ ಗಾಂಜಾವನ್ನ ಮೊದಲೇ ನಿರ್ಧರಿಸಿದ ಜಾಗದಲ್ಲಿ ಒಗೆಯಲಾಗತ್ತೆ. ಅದೇ ಸಮಯದಲ್ಲಿ ಅದರ ಲೋಕೇಷನ್ ಗಾಂಜಾ ಸಾಗಾಟ ಮಾಡುವ ಆರೋಪಿಗೆ ಕಳಿಸಲಾಗತ್ತೆ. ಬಿದ್ದ ಗಾಂಜಾವನ್ನ ಆತ ತೆಗೆದುಕೊಂಡು ಹೋಗಿ ಬೇರೆ ಬೇರೆ ಪಾಕೇಟ್‌ಗಳನ್ನ ಮಾಡಿ ಮಾರಾಟ ಮಾಡಲಾಗುತ್ತಂತೆ. ಈ ವಿಷಯವನ್ನ ಅರಿತ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ಆರೋಪಿಯನ್ನ ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.