Posts Slider

Karnataka Voice

Latest Kannada News

ಧಾರವಾಡದಲ್ಲಿ “ನಿವೃತ್ತ ಸೇನಾನಿ”ಯ ಮನೆಗೆ ಕನ್ನ ಹಾಕಿದ ಖದೀಮರು…!!!

1 min read
Spread the love

ಧಾರವಾಡ: ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪರವೂರಿಗೆ ಹೋಗಿದ್ದ ನಿವೃತ್ತ ಸೇನಾನಿಯ ಮನೆಗೆ ಕನ್ನ ಹಾಕಿರುವ ಖದೀಮರು, ಚಿನ್ನ, ಬೆಳ್ಳಿ ಹಾಗೂ ನಗದನ್ನ ದೋಚಿಕೊಂಡು ಪರಾರಿಯಾಗಿರುವ ಘಟನೆ ಧಾರವಾಡದ ಚೈತನ್ಯನಗರದಲ್ಲಿ ಬೆಳಕಿಗೆ ಬಂದಿದೆ.

ಸದ್ಯ ನಗರದ ಎಸ್‌ಬಿಐ ಬ್ಯಾಂಕಿನ ಶಾಖೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಿದಾನಂದ ಹೊಟ್ಟೆಮ್ಮನವರ ಎಂಬುವವರ ಮನೆಯೇ ಕಳ್ಳತನವಾಗಿದೆ.

ಈ ಬಗ್ಗೆ ಚಿದಾನಂದ ಅವರು ಮಾತಾಡಿದ್ದು ಇಲ್ಲಿದೆ ನೋಡಿ…

ಮನೆಯಲ್ಲಿದ್ದ ನಕ್ಲೆಸ್, ಚೈನ್ ಸೇರಿ ನಗದನ್ನ ದೋಚಲಾಗಿದೆ. ಮನೆಯ ಮುಂಭಾಗಿಲಿನ ಕೀಲಿ ಮುರಿಯಲಾಗಿದ್ದು, ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed