ಧಾರವಾಡದಲ್ಲಿ “ಪೆಂಗ್” ಅಧೀಕ್ಷಕನ ಮಾತು ಕೇಳಿ ದಾರಿ ತಪ್ಪಿದ್ರಾ ‘ಡಿಡಿಪಿಐ’ ಕೆಳದಿಮಠ…!?
1 min readಧಾರವಾಡ: ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಹಿರಿಯ ಪತ್ರಾಂಕಿತ ವ್ಯವಸ್ಥಾಪಕರನ್ನು ಪ್ರಭಾರ ವ್ಯವಸ್ಥಾಪಕ ಸಹಾಯಕರನ್ನಾಗಿ ನೀಯೊಜಿಸಬೇಕಾಗಿದ್ದ ಧಾರವಾಡ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅದಾವುದೋ ಪೆಂಗ್ ಅಧೀಕ್ಷಕನೋಬ್ಬನ ಮಾತು ಕೇಳಿ ತಮ್ಮದೇ ಕಛೇರಿಯ ಅಧೀಕ್ಷನೋಬ್ಬನ್ನು ಪ್ರಭಾರಿ ಪತ್ರಾಂಕಿತ ಸಹಾಯಕ ಎಂದು ಆದೇಶ ಮಾಡಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಇಂದು ಧಾರವಾಡ ಉಪನಿರ್ದೇಶಕರ ಕಚೇರಿಯಲ್ಲಿ ಪತ್ರಾಂಕಿತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದವರು ಚಿಕ್ಕೋಡಿ ಉಪನಿರ್ದೇಶಕರ ಕಛೇರಿಗೆ ವರ್ಗಾವಣೆಗೊಂಡ ಹಾಜರಾದ ಹಿನ್ನೆಲೆ ಧಾರವಾಡ ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕರನ್ನಾಗಿ ಧಾರವಾಡದಲ್ಲಿ ಕಾರ್ಯನಿರ್ವಹಿಸುವ ಹಿರಿಯ ಪತ್ರಾಂಕಿತ ವ್ಯವಸ್ಥಾಪಕರನ್ನು ಉಪನಿರ್ದೇಶಕರ ಕಛೇರಿಯ ಪ್ರಭಾರಿಯನ್ನಾಗಿ ನಿಯೋಜಿಸಬೇಕಾಗಿದ್ದಂತಹ ಧಾರವಾಡದ ಉಪನಿರ್ದೇಶಕರು, ತಮ್ಮದೇ ಕಚೇರಿಯ ಪೆಂಗ್ ಅಧೀಕ್ಷಕನ ಮಾತು ಕೇಳಿ ಅವರ ಕಚೇರಿಯಲ್ಲಿಯೇ ಕಾರ್ಯನಿರ್ಸುತ್ತಿರುವ ಅಧೀಕ್ಷಕನಿಗೆ ಪ್ರಭಾರಿ ಪತ್ರಾಂಕಿತ ಸಹಾಯಕರಾಗಿ ಚಾರ್ಜ್ ನೀಡಿ ಆದೇಶ ಹೊರಡಿಸಿದ್ದಾರೆ. ಅರ್ಹ ಪತ್ರಾಂಕಿತ ವ್ಯವಸ್ಥಾಪಕರು ಧಾರವಾಡದಲ್ಲಿ ಇದ್ದಾಗಲೂ ಕೂಡ ಪತ್ರಾಂಕಿತ ವ್ಯವಸ್ಥಾಪಕರಿಗೆ ಅನ್ಯಾಯ ಮಾಡಿ ತಮ್ಮದೇ ಕಚೇರಿಯ ಅಧೀಕ್ಷಕರನ್ನು ನಿಯೋಜನೆ ಮಾಡಿ ಅನ್ಯಾಯ ಎಸಗಿದ್ದಾರೆಂದು ಧಾರವಾಡದಲ್ಲಿಯ ಪ್ರಜ್ಞಾವಂತರು ಮಾತನಾಡಿಕೊಳ್ಳುವ ಸ್ಥಿತಿ ಬಂದಿದೆ.