ಧಾರವಾಡ: ಭೀಕರ ಅಪಘಾತ, ಜೀವ ಉಳಿಯಲ್ಲ ಎಂದುಕೊಂಡು “ಇದ್ದೊಬ್ಬ ಮಗನ” ಅಂಗಾಂಗ ದಾನ ಮಾಡಿದ “ಮಹಾತಾಯಿ”…!!!

ಧಾರವಾಡ: ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಹಿಂಬದಿಯಿಂದ ಬಂದ ಬೊಲೇರೊ ವಾಹನದಿಂದ ಡಿಕ್ಕಿ ಹೊಡೆದ ಪರಿಣಾಮ ಕೋಮಾದಲ್ಲಿದ್ದ ಯುವಕನ ಅಂಗಾಂಗಳನ್ನ ದಾನ ಮಾಡಿರುವ ಘಟನೆ ಸಂಭವಿಸಿದೆ.
Exclusive videos…
ಧಾರವಾಡದ ಹಳೇ ಡಿಎಸ್ಪಿ ವೃತ್ತದ ಬಳಿ ಘಟನೆ ನಡೆದಿದ್ದು ದುರ್ಮರಣಕ್ಕೀಡಾದ ಯುವಕನನ್ನ ಮದಿಹಾಳ ಸಿದ್ಧಾರೂಢ ಕಾಲನಿಯ ರೋಹಿತ ಜಗದೀಶ ಕುಂಬಾರ ಎಂದು ಗುರುತಿಸಲಾಗಿದೆ.
ಬೊಲೇರೊ ವಾಹನ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೋಹಿತನನ್ನ ಆಸ್ಪತ್ರೆಗೆ ರವಾನೆ ಮಾಡಿದರೂ, ಜೀವ ಉಳಿಯುವುದಿಲ್ಲ ಎಂದು ಗೊತ್ತಾದ ತಕ್ಷಣವೇ ರೋಹಿತ ತಾಯಿ ನರ್ಸ್ ಆಗಿದ್ದರಿಂದ ಆತನ ಹಲವು ಅಂಗಾಂಗಳನ್ನ ದಾನ ಮಾಡಿದ್ದಾರೆ.
ಇದ್ದ ಒಬ್ಬ ಮಗ ಉಳಿಯುವುದಿಲ್ಲ ಎಂದು ಗೊತ್ತಾದ ತಕ್ಷಣವೇ ಹಲವರಿಗೆ ದಾರಿದೀಪವಾಗಲು ನಿರ್ಧರಿಸಿದ ಪಾಲಕರ ನಿರ್ಧಾರ ಮೆಚ್ಚುಗೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.