ಧಾರವಾಡ ಡಿಡಿಪಿಐ ಕಚೇರಿಯಲ್ಲಿ “ದಲಿತ ವಿರೋಧಿ” ಪೆಂಗ್ ಅಧೀಕ್ಷಕನ ಕುಮ್ಮಕ್ಕು- ನಿಯಮ ಮೀರಿ ಪತ್ರಾಂಕಿತ ಸಹಾಯಕ ಪ್ರಭಾರ ನೀಡಿಕೆ…
1 min readಧಾರವಾಡ: ಶಿಕ್ಷಣ ಇಲಾಖೆಯಲ್ಲಿ ದಲಿತ ಅಧಿಕಾರಿಗೆ ನೀಡಬೇಕಾದ ಪತ್ರಾಂಕಿತ ಸಹಾಯಕರ ಪ್ರಭಾರ ಹುದ್ದೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿ, ಕೆಳ ವೃಂದದ ನೌಕರನಿಗೆ ಸಿಗುವಂತೆ ವ್ಯವಸ್ಥಿತ ಕುತಂತ್ರ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಧಾರವಾಡ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಯಲ್ಲಿಯ ಪತ್ರಾಂಕಿತ ಸಹಾಯರ ಹುದ್ದೆಯು ವರ್ಗಾವಣೆಯಿಂದ ನಿನ್ನೆ ಖಾಲಿಯಾದ ಹಿನ್ನೆಲೆಯಲ್ಲಿ, ಕೆ.ಸಿ.ಎಸ್. ನಿಯಮ-68ರ ಪ್ರಕಾರ ಆ ಹುದ್ದೆಯನ್ನು ಸ್ಥಳಿಯ ಬಿಇಒ ಕಛೇರಿಯ ಹಿರಿಯ ಪತ್ರಾಂಕಿತ ವ್ಯವಸ್ಥಾಪರಿಗೆ ನೀಡಬೇಕಾಗಿತ್ತು. ಆದರೆ, ಉಪನಿರ್ದೇಶಕರ ಕಛೇರಿಯ, ಜಾತಿವಾದಿ ಮನಃಸ್ಥಿತಿಯ ಪೆಂಗ್ ಅಧೀಕ್ಷಕನೊಬ್ಬನ ಹಠದಿಂದ ದಲಿತ ಅಧಿಕಾರಿಗೆ ನೀಡಬೇಕಾಗಿದ್ದ ಪ್ರಭಾರ ಹುದ್ದೆಯನ್ನು ತಪ್ಪಿಸಿದ್ದಾರೆಂದು ಹೇಳಲಾಗುತ್ತಿದೆ.
ಧಾರವಾಡ ಉಪನಿರ್ದೇಶಕರ ಕಛೇರಿಯಿಂದ ಚಿಕ್ಕೋಡಿ ಉಪನಿರ್ದೇಶಕರ ಕಛೇರಿಗೆ ಬಿಡುಗಡೆಗೊಂಡ ಪತ್ರಾಂಕಿತ ಸಹಾಯಕರಾದ ದೀಪಕ ಮಾನೆ ಅವರನ್ನು ಬಿಡುಗಡೆಗೊಳಿಸಿದ ನಂತರ ಅವರ ಸ್ಥಾನಕ್ಕೆ ಧಾರವಾಡದಲ್ಲಿಯ ಬಿಇಓ ಕಛೇರಿಯಲ್ಲಿಯ ಹಿರಿಯ ಪತ್ರಾಂಕಿತ ವ್ಯವಸ್ಥಾಪಕರೊಬ್ಬರನ್ನು ಪ್ರಭಾರ ಹುದ್ದೆಗೆ ನಿಯೋಜಿಸಿ ಆದೇಶಬೇಕಾಗಿತ್ತು.
ಈ ಕುರಿತು ಧಾರವಾಡ ಉಪನಿರ್ದೇಶಕರು ಸ್ಥಳೀಯ ಪತ್ರಾಂಕಿತ ವ್ಯವಸ್ಥಾಪರೊಬ್ಬರನ್ನು ಆದೇಶಿಸಲು ಸೂಚಿಸಿದ್ದರು. ನಂತರ ಸ್ಥಳೀಯ ಹಿರಿಯ ಪತ್ರಾಂಕಿತ ವ್ಯವಸ್ಥಾಪಕರ ಹೆಸರಿನೊಂದಿಗೆ ಪ್ರಭಾರ ಆದೇಶ ಪ್ರತಿಗೆ ಸಹಿ ಮಾಡಿಸಲು ಮುಂದಾದಾಗ ಕಛೇರಿಯ ಪೆಂಗ್ ದಲಿತ ವಿರೋಧಿ ಅಧೀಕ್ಷಕನೊಬ್ಬ ಪ್ರಭಾರ ಹುದ್ದೆಯನ್ನು ದಲಿತರೊಬ್ಬರಿಗೆ ನೀಡಲು ಸುತಾರಾಂ ಒಪ್ಪದ ಕಾರಣ ನಿಯಮ ಉಲ್ಲಂಘಿಸಿ, ಅದೇ ಕಛೇರಿಯ ಲೆಕ್ಕ ಅಧೀಕ್ಷಕ ಬಸವರಾಜ ಮನಹಳ್ಳಿ ಎಂಬವವರಿಗೆ ಪ್ರಭಾರ ಹುದ್ದೆಯ ಆದೇಶ ನೀಡಿದ್ದಾರೆ.
ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶಿಕ್ಷಣ ಇಲಾಖೆ ಅತೀ ಮುಖ್ಯವಾದ ಜವಾಬ್ದಾರಿ ಹೊಂದಿರುತ್ತದೆ. ದುರಂತವೆಂದರೆ, ಅದೇ ಇಲಾಖೆ ಇಂತಹ ಹೀನ ಕೃತ್ಯಗಿಳಿದಿದ್ದು, ಜಿಡ್ಡು ಹಿಡಿದ ಜಾತಿ ವ್ಯವಸ್ಥೆಗೊಂದು ಕೈಕನ್ನಡಿಯಾಗಿದೆ ಎಂದರೆ ಅತಿಶೋಕ್ತಿಯಾಗಲಾರದು.