ಧಾರವಾಡ ಡಿಡಿಪಿಐ “ಕ್ರಾಸ್ ಡೆಪ್ಟೇಟೇಶನ್” ರದ್ದು ಆರ್ಡರ್: ತೋರಿಕೆಗಷ್ಟೇ, ಜಾರಿಗಲ್ಲ…
1 min readಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಹೊರಡುವ ಅಕ್ರಮ ಆದೇಶಗಳಷ್ಟೇ ಬೇಗನೇ ಇಂಪ್ಲಿಮೆಂಟ್ ಆಗುತ್ತಿದ್ದು, ಸಕ್ರಮ ಆದೇಶಗಳು ಕೇವಲ ತೋರಿಕೆಗಾಗಿ ಮಾತ್ರ ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಧಾರವಾಡ ಜಿಲ್ಲೆಯಲ್ಲಿ ಸರಕಾರದ ನಿಯಮಗಳನ್ನ ಮೀರಿ ಕ್ರಾಸ್ ಡೆಪ್ಟೇಟೇಷನ್ ನಡೆಯುತ್ತಿದ್ದು, ಈ ಬಗ್ಗೆ ಕರ್ನಾಟಕವಾಯ್ಸ್. ಕಾಂ ನಿರಂತರವಾಗಿ ಮಾಹಿತಿಯನ್ನ ಕೊಡುತ್ತಿದೆ. ಈಗ ನವಲೂರ ಶಾಲೆಯಿಂದ ಡೆಪ್ಟೇಟೇಷನ್ ರದ್ದು ಮಾಡಿರುವ ಆದೇಶ ಹೊರ ಬಂದು ವಾರವಾದರೂ, ನವಲೂರ ಶಾಲೆಯಿಂದ ನೇಕಾರನಗರದ ಶಾಲೆಗೆ ಇನ್ನೂ ದೊಡ್ಡವಾಡ ಎನ್ನುವವರು ಹೋಗಿಲ್ಲ.
ನವಲೂರ ಶಾಲೆಯಲ್ಲಿದ್ದ ದೈಹಿಕ ಶಿಕ್ಷಣ ಶಿಕ್ಷಕನನ್ನ ಪೋಸ್ಟ್ ಇಲ್ಲದ್ದನ್ನ ಕ್ರಿಯೇಟ್ ಮಾಡಿ, ಸಿನೀಯಾರಿಟಿ ಮೀರಿಯಿದ್ದರೂ, ಅವರನ್ನ ಮಾತ್ರ ಇನ್ನೂ ಮುಂದುವರೆಸಲಾಗಿದೆ. ಡಿಡಿಪಿಐ ಕೆಳದಿಮಠ ಅವರು, ದಾರಿ ತಪ್ಪಿಸುವುದನ್ನ ದಾರಿ ತಪ್ಪಿದವರಂತೆ ತೋರಿಸಿಕೊಂಡು ಹೋಗುತ್ತಿರುವ ಹಿಂದಿನ ಉದ್ದೇಶವೇನು ಎಂಬುದು ಯಕ್ಷಪ್ರಶ್ನೆಯಾಗಿದೆ.
ಶಿಕ್ಷಣ ಇಲಾಖೆಯಲ್ಲಿ ಹಲವು ಪ್ರಮಾದಗಳು ನಡೆಯುತ್ತಿದ್ದು, ಆ ಎಲ್ಲ ಸತ್ಯವನ್ನ ಕರ್ನಾಟಕವಾಯ್ಸ್. ಕಾಂ ಹೊರ ಹಾಕಲಿದೆ. ನವಲೂರ ಶಾಲೆಯಿಂದ ನೇಕಾರನಗರದ ಶಾಲೆಗೆ ಹೋಗಬೇಕಾದ ಶಿಕ್ಷಕ ಹೋಗದೇ ಇದ್ದಾಗ, ಏನು ಕ್ರಮ ಜರುಗಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.