“ಅವೈಜ್ಞಾನಿಕ ಕಾಮಗಾರಿ” ಹೇಗೆ ಮಾಡಬಹುದೆಂದು ನೋಡಬೇಕಾ… ಹಾಗಾದ್ರೇ ಧಾರವಾಡ ‘DC-AC’ ಕಚೇರಿಗೆ ಬಂದು ಹೋಗಿ…!!!

ಧಾರವಾಡ: ಬುದ್ಧಿವಂತರು ಹೆಚ್ಚಿರುವ ಧಾರವಾಡದಲ್ಲಿ ಅತೀ ಹೆಚ್ಚು ಬುದ್ಧಿಯನ್ನ ಬಳಕೆ ಮಾಡಿಕೊಂಡು ಕಾಮಗಾರಿ ನಡೆಸುತ್ತಿರುವ ಜೀವಂತ ಸಾಕ್ಷಿಯೊಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಣುತ್ತಿದ್ದು, ಅವೈಜ್ಞಾನಿಕ ಎಂದರೇ ಹೇಗಿರತ್ತೆ ಎಂಬುದನ್ನು ತೋರಿಸತೊಡಗಿದೆ.
ಮೊದಲು ಈ ವೀಡಿಯೋ ನೋಡಿಬಿಡಿ…
ಇದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸಿ ಕಚೇರಿಗೆ ಹೋಗುವ ದಾರಿ. ಅಷ್ಟೇ ಅಲ್ಲ, ಮಾಳಮಡ್ಡಿಯಿಂದ ಕೆಸಿಡಿಗೆ ಹೋಗಲು ಸೇರುವ ದಾರಿಯೂ ಇದೆ. ಆದರೆ, ನೀವು ಈ ಎರಡು ಭಾಗದಿಂದ ಅತ್ತಿಂದಿತ್ತ ಹೋಗಲು ರಸ್ತೆ ಬಂದ್ ಮಾಡಿ, ಕಾಮಗಾರಿ ನಡೆಸಲಾಗುತ್ತಿದೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಮುಂದೇನೆ ಅವೈಜ್ಞಾನಿಕ ಎರಡು ರಸ್ತೆಯನ್ನ ಬಂದ್ ಮಾಡಿ ಕಾಮಗಾರಿ ನಡೆಸುತ್ತಿದ್ದರೂ, ಯಾರೂ ಕೇಳದೇ ಇರೋದು ಸೋಜಿಗ ಮೂಡಿಸಿದೆ. ಸಾರ್ವಜನಿಕರ ತೊಂದರೆ ಕೇಳುವವರು ಇಲ್ಲವೇ ಇಲ್ಲ, ಅನ್ನೊದಕ್ಕೆ ಇದೊಂದು ಸೇರ್ಪಡೆಯಷ್ಟೇ…