“ಮುತವಲ್ಲಿ ಬಸ್ತವಾಡ”ನ ಮನೆಯಲ್ಲಿ “ಷಟ್‌ಬ್ಯಾನಿ ಬರಲಿ” ಹಾಡಿಗೆ ಕುಣಿದ ಚೆಲುವೆಗೆ ಹಣ ತೂರಿದ ‘ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣನವರ’…

ಧಾರವಾಡ: ವಿದ್ಯಾಕಾಶಿ ಎಂದು ಕರೆಯಲ್ಪಡುವ ಧಾರವಾಡದಲ್ಳಿ ಎಂತೆಂಥ ಅನಾಚಾರಗಳು ನಡೆಯುತ್ತಿವೆ ಎಂಬುದನ್ನ ಕರ್ನಾಟಕವಾಯ್ಸ್.ಕಾಂ ಬಹಿರಂಗ ಮಾಡುತ್ತಿದ್ದು, ಮುಸ್ಲಿಂ ಸಮಾಜವೇ ತಲೆತಗ್ಗಿಸುವಂತಹ ಘಟನೆಗೆ ಕೆಪಿಸಿಸಿ ಸದಸ್ಯನೇ ಕಾರಣವಾಗಿದ್ದು ಸೋಜಿಗ ಮೂಡಿಸಿದೆ.
ಮಗಳ ಮದುವೆಯ ಹಲ್ದಿ (ಅರಿಷಣ ಹಚ್ಚುವುದು) ಕಾರ್ಯಕ್ರಮದ ವೇಳೆಯಲ್ಲಿ ಡಾನ್ಸರ್ ಕರೆಸಿರುವ ಸೋ ಕಾಲ್ಡ್ ಮುತವಲ್ಲಿ ಫಯಾಜ್ ಬಸ್ತವಾಡ, ಸಮಾಜದಲ್ಲಿ ತಾವು ಹೇಗೆ ಎಂಬುದನ್ನ ಈ ಮೂಲಕ ತೋರಿಸಿಕೊಟ್ಟಿದ್ದಾರೆ.
ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಸಚಿವ ಆಪ್ತ ಶಿವಶಂಕರ ಹಂಪಣ್ಣನವರ ಅಸಭ್ಯ ಹಾಡಿಗೆ ಮುಸ್ಲಿಂ ಸಮುದಾಯದ ಮನೆಯಲ್ಲಿ ಕುಣಿದು ‘ಚೆಲುವೆಗೆ’ ಹಣ ತೂರಿ ತಮ್ಮ ಮೈ ಕುಣಿಸಿರುವ ವೀಡಿಯೋ ವೈರಲ್ ಆಗಿದೆ. ತಾವೊಬ್ಬ ಹಿರಿಯ ರಾಜಕಾರಣಿ ತಮಗೆ ಮೊಮ್ಮಕ್ಕಳು ಇದ್ದಾರೆಂಬ ಕಲ್ಪನೆಯನ್ನೂ ಶಿವಶಂಕರ ಹಂಪಣ್ಣನವರು ಮರೆತು ಕುಣಿದಿದ್ದಾರೆ.
Exclusive video…
ಫಯಾಜ್ ಬಸ್ತವಾಡ ಕೂಡಾ ಮಾಜಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಹಲವು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವುದು ಪೊಲೀಸರಿಗೆ ಗೊತ್ತೆಯಿದೆ. ಆದರೆ, ಇಂಥವರಿಂದಲೇ ತಮ್ಮ ಹೆಸರಿಗೆ ಕಳಂಕ ಬರುತ್ತಿದೆ ಎಂಬ ಸತ್ಯ ಮಾಜಿ ಸಚಿವರಿಗೆ ಇನ್ನೂ ಗೊತ್ತಾಗದೇ ಇರುವುದು ಅಚ್ಚರಿ ಮೂಡಿಸುತ್ತಿದೆ.
ಮುಸ್ಲಿಂ ಸಮಾಜದ ಓರ್ವ ಮುತವಲ್ಲಿ ಆಗಿರುವ ಫಯಾಜ್ ಬಸ್ತವಾಡ ತನ್ನ ಮನೆಯಲ್ಲಿ ಎಂತಹ ಸಂಸ್ಕೃತಿಯನ್ನ ಬೆಳೆಸುತ್ತಿದ್ದಾರೆಂಬುದು ಈ ಮೂಲಕ ಬಹಿರಂಗವಾಗಿದೆ. ಸಮಾಜದ ಬಗ್ಗೆ ಮಾತಾಡುವ ಹಿರಿಯರು ಈ ಬಗ್ಗೆ ಗಮನ ಹರಿಸಬೇಕಿದೆ.
ಧಾರವಾಡವೆಂಬ ಸುಸಂಸ್ಕೃತರ ನಾಡಿನಲ್ಲಿ ಬೇರೆ ಕಡೆಯಿಂದ ಡಾನ್ಸರ್‌ಗಳನ್ನ ಕರೆಸಿ ಕುಣಿಸುವ ವ್ಯವಸ್ಥೆ ನಡೆಯುತ್ತಿದೆ ಎಂಬುದು ಪೊಲೀಸ್ ಕಮೀಷನರ್ ಅವರಿಗೆ ಗೊತ್ತಾಗಬೇಕಿದೆ. ದೇಶ, ದೇಶಾಭಿಮಾನ ಮತ್ತೂ ಸಂಸ್ಕೃತಿಗಳ ಬಗ್ಗೆ ಮಾತಾಡುವ ಸಂಘಟನೆಗಳೂ ಇಂತಹ ಘಟನೆಗಳನ್ನ ವಿರೋಧಿಸಬೇಕಿದೆ.