ಧಾರವಾಡ ಜಿಲ್ಲಾಧಿಕಾರಿ “ದಿವ್ಯ ಪ್ರಭು” ಮೇಡಂ- 50-50 ವಂಚನೆಯ ಬಗ್ಗೆ ಏನ್ಮಾಡ್ತಿದ್ದಾರೆ….!?
ಧಾರವಾಡ: ಅಖಂಡ ಧಾರವಾಡ ಜಿಲ್ಲೆಯಲ್ಲಿ ನಡೆದ ಮತ್ತು ನಡೆಯುತ್ತಿರುವ ಬೆಳೆವಿಮೆ ಪರಿಹಾರ ಫಿಪ್ಟಿ-ಫಿಪ್ಟಿ ವಂಚನೆಯ ಕುರಿತು ಎಷ್ಟು ಮಾಹಿತಿಯನ್ನು ಧಾರವಾಡದ ಜಿಲ್ಲಾಧಿಕಾರಿಗಳು ಪಡೆದುಕೊಂಡಿದ್ದಾರೆ ಎಂಬುದು ಹೊರಬರಬೇಕಿದೆ.
ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕೆಲ ಭ್ರಷ್ಟರು ಏಜೆಂಟರ್ ಜೊತೆಗೂಡಿ ಮಾಡಿರುವ ಮೋಸದ ಮಾಹಿತಿ ತಮ್ಮದೇ ಜಿಲ್ಲೆಯಲ್ಲಿ ಇದೆ ಎಂಬುದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಇದ್ದೆ ಇದೆ.
ಹಿಂಗಾರು ಬೆಳೆಯ ಎನ್‌ರೋಲ್‌ಗಳ ನಿಖರ ಮಾಹಿತಿ ಪಡೆದು, ಅದರಲ್ಲಿ ಇರುವ ಹೆಸರುಗಳು ಮತ್ತು ಈ ಹಿಂದೆ ಹಿಂಗಾರು ಬೆಳೆಗೆ ಅರ್ಜಿ ಹಾಕಿರುವ ನೂರೆಂಟು ರೈತರ ಹೆಸರುಗಳು ಒಂದೇ ಇರುವುದು ಗೊತ್ತಾಗತ್ತೆ.
ವಂಚನೆಯಲ್ಲಿ ಝಂಡಾ ಊರಿರುವ ಡಾಕ್ಟರ್ ಎಂದು ಕರೆಸಿಕೊಳ್ಳುವ ಗ್ರಾಮ ಪಂಚಾಯತಿ ಸದಸ್ಯನೋರ್ವನನ್ನ ಇಲಾಖೆಯ ಮೂಲಕ ವಿಚಾರಣೆ ನಡೆಸಿದರೂ ಸಾಕು, ಹಸಿರು ಟವೆಲ್ ಹಾಕಿಕೊಂಡು ಹೋರಾಟ ಮಾಡಿ, ರೈತರ ಹೆಸರಲ್ಲಿ ಹಣ ಹೊಡೆಯುತ್ತಿರುವ ಆಸಾಮಿಯೂ ಸೇರಿ ಬಹುತೇಕರ ಹೆಸರು ಹೊರಬರಲಿವೆ.
ಡಿಸಿಯವರು ಹೀಗೆ ಮಾಡ್ತಾರಾ, ಕಾದು ನೋಡೋಣ.