ಮೊರಬದಲ್ಲಿ ಮತ್ತೆ ಮೂರು ಪಾಸಿಟಿವ್: 202 ಕ್ಕೇರಿದ ಧಾರವಾಡ ಜಿಲ್ಲೆಯ ಕೋವಿಡ್ ಕೇಸ್
1 min readಧಾರವಾಡ: ಜಿಲ್ಲೆಯಲ್ಲಿಂದು ನವಲಗುಂದ ತಾಲೂಕಿನ ಮೊರಬ ಗ್ರಾಮದ ಮೂವರು ಸೇರಿದಂತೆ ಒಟ್ಟು 04 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
DWD 199 – ಪಿ- 9158 (72 ವರ್ಷ,ಮಹಿಳೆ) ,
DWD 200- ಪಿ-9159 (43 ವರ್ಷ, ಪುರುಷ),
DWD 201- ಪಿ-9160 (30 ವರ್ಷ, ಪುರುಷ)
ಈ ಮೂವರು ನವಲಗುಂದ ತಾಲೂಕು ಮೊರಬ ನಿವಾಸಿಗಳು. ಪಿ-7060 ಅವರೊಂದಿಗೆ ಸಂಪರ್ಕ ಹೊಂದಿದ್ದರು.
DWD 202 – ಪಿ- 9161 (35 ವರ್ಷ,ಮಹಿಳೆ ) , ಇವರು ಧಾರವಾಡ ವಿಜಯನಗರ ಮಾವಿನತೋಪು ಹತ್ತಿರದ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ (ಐಎಲ್ಐ) ಬಳಲುತ್ತಿದ್ದರು.
ಇಬ್ಬರು ಗುಣಮುಖ , ಆಸ್ಪತ್ರೆಯಿಂದ ಬಿಡುಗಡೆ
ಕೋವಿಡ್ ನಿಂದ ಸಂಪೂರ್ಣ ಗುಣಮುಖರಾಗಿರುವ ಪಿ-2808 ( 27 , ಮಹಿಳೆ) , ಪಿ- 5485 (04 ,ಬಾಲಕಿ) ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 202 ಕ್ಕೇರಿದೆ. 76 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.