ಧಾರವಾಡ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನ: ಮುತ್ತಣ್ಣ ಶಿವಳ್ಳಿ- ಕೆ.ಎನ್.ಗಡ್ಡಿ ನಡುವೆ ತೀವ್ರ ಪೈಪೋಟಿ…!

ಧಾರವಾಡ: ಕಾಂಗ್ರೆಸ್ ಪಕ್ಷದಲ್ಲಿ ಹಲವು ಬದಲಾವಣೆಗಳು ನಡೆಯುತ್ತಿದ್ದು, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷಗಿರಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ಶಹರ ಮತ್ತು ಗ್ರಾಮೀಣ ಭಾಗವೆನ್ನುವ ಮಾತುಗಳು ಮತ್ತೆ ಮುನ್ನಲೆಗೆ ಬಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿವೆ.

ಹಾಲಿ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರ ಬದಲಾವಣೆ ಆಗುವುದು ಖಚಿತವಾಗಿದ್ದು, ಕೆಲವರು ಪ್ರಯತ್ನ ಮುಂದುವರೆಸಿದ್ದಾರೆ. ದಿವಂಗತ ಮಾಜಿ ಶಾಸಕ ಸಿ.ಎಸ್.ಶಿವಳ್ಳಿ ಅವರ ಸಹೋದರ ಮುತ್ತಣ್ಣ ಶಿವಳ್ಳಿ ಮುಂಚೂಣಿಯಲ್ಲಿದ್ದು, ಮಾಜಿ ಸಚಿವ ಕೆ.ಎನ್.ಗಡ್ಡಿ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ.
ಈಗಾಗಲೇ ಈ ಬಗ್ಗೆ ಪ್ರಮುಖವಾದ ನಾಯಕರು ಮಾತುಕತೆಯನ್ನ ನಡೆಸಿದ್ದು, ಮುತ್ತಣ್ಣ ಶಿವಳ್ಳಿ ಹಾಗೂ ಕೆ.ಎನ್.ಗಡ್ಡಿ ಅವರ ಹೆಸರು ಮುಂಚೂಣಿಯಲ್ಲಿವೆ. ಕಾಂಗ್ರೆಸ್ ಗ್ರಾಮೀಣ ಭಾಗದ ಅಧ್ಯಕ್ಷಗಿರಿಯನ್ನ ಗ್ರಾಮೀಣ ಭಾಗದಲ್ಲಿರುವ ನಾಯಕರಿಗೆ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ.

ಮುತ್ತಣ್ಣ ಶಿವಳ್ಳಿ ಅವರಿಗೆ ಜಿಲ್ಲೆಯ ಕೆಲವು ನಾಯಕರು ಪತ್ರವನ್ನ ನೀಡಿದ್ದು, ಮಾಜಿ ಸಚಿವ ಕೆ.ಎನ್.ಗಡ್ಡಿ ಅವರನ್ನ ಮಾಡುವಂತೆ ಹಲವರು ರಾಜ್ಯದ ನಾಯಕರನ್ನ ಕೋರಿದ್ದಾರೆ. ಈ ನಡುವೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು, ಗಡ್ಡಿಯವರ ಜೊತೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ.
ಜಿಲ್ಲಾ ಅಧ್ಯಕ್ಷಗಿರಿಯ ಕಾವು ಕಾಂಗ್ರೆಸ್ ನಲ್ಲಿ ಹೆಚ್ಚಾಗಿದ್ದು, ಇದು ಯಾವ ಮಟ್ಟಕ್ಕೆ ಬಂದು ನಿಲ್ಲುತ್ತದೆ ಎಂಬುದನ್ನ ಕಾದು ನೋಡಬೇಕಿದೆ.