ಧಾರವಾಡದಲ್ಲಿ ಐಸ್ ಪ್ಯಾಕ್ಟರಿಗೆ ಬೆಂಕಿ- ನಾಶವಾಗಿದ್ದು ಏನು.. ಎಷ್ಟು ಗೊತ್ತಾ..?
1 min readಧಾರವಾಡ: ನಗರದ ಮಾಳಾಪುರ ವ್ಯಾಪ್ತಿಯಲ್ಲಿರುವ ಶಿವಾಂಗ್ ಎಂಟರಪ್ರೈಜಿಸ್ ಹೆಸರಿನ ಹಿಂದೂಸ್ತಾನ ಯುನಿಲಿವರ್ ಲಿಮಿಟೆಡ್ ಕಂಪನಿಯ ಆದಿತ್ಯ ಐಸ್ ಕ್ರಿಂ ಶೇಖರಣಾ ಗೋಡೌನಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾದ ಘಟನೆ ನಡೆದಿದೆ.
ಕಿಶೋರಕುಮಾರ ಪಾಟೀಲ ಎಂಬುವವರಿಗೆ ಸೇರಿದ ಕೋಲ್ಡ್ ಸ್ಟೋರೇಜ್ ಗೋಡೌನದಲ್ಲಿದ್ದ ಕಂಪ್ಯೂಟರ್, ಲ್ಯಾಪ್ ಟಾಪ್, ದ್ವಿಚಕ್ರವಾಹನ, ಸ್ಟೀಲ್ ಕಪಾಟ ಸೇರಿದಂತೆ 30 ರಿಂದ 35 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನ ನಂದಿಸಲು ಪ್ರಯತ್ನ ನಡೆಯಿತು. ಕೋಲ್ಡ್ ಸ್ಟೋರೇಜ್ ಆಗಿದ್ದರಿಂದ ಬೆಂಕಿ ನಂದಿಸಲು ಸಾಕಷ್ಟು ತೊಂದರೆ ಅನುಭವಿಸಲಾಬೇಕಾಯಿತು.
ಇದೇಲ್ಲದರ ನಡುವೆಯೂ ಅಗ್ನಿಶಾಮಕ ದಳ ಬೆಂಕಿ ನಂದಿಸುತ್ತ ಒಳಗೆ ಹೋಗಿ ಸಂಪೂರ್ಣವಾಗಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಯಿತು.