ಧಾರವಾಡ ಜಿಲ್ಲೆಯಲ್ಲಿ ದೇವಿಯ ಪವಾಡ- ವಿಸ್ಮಯದ ಘಟನೆಗೆ ಸಾಕ್ಷಿಯಾದ ದುರ್ಗಾ ಮಾತೆ..!
1 min readದೇವಸ್ಥಾನದಲ್ಲಿ ತಾಮ್ರದ ಕೊಡವನ್ನೂಮುಟ್ಟದ ಕಳ್ಳರು
ಧಾರವಾಡ: ದೀಪಾವಳಿಯ ಅಮವಾಸ್ಯೆ ಮುಗಿದ ಕೆಲವೇ ದಿನಗಳಲ್ಲಿ ದೇವಿಯ ಪವಾಡವೊಂದು ನಡೆದಿದ್ದು, ಕಳ್ಳತನಕ್ಕೆ ಬಂದ ಚೋರರಿಗೆ ಏನೂ ಸಿಗದಂತಾಗಿ ಮರಳಿ ಹೋದ ಘಟನೆ ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಶ್ಯಾಗೋಟಿ ಪ್ಲಾಟನಲ್ಲಿ ನಡೆದಿದೆ.
ಪುರಾತನವಾಗಿದ್ದ ಸಣ್ಣದೊಂದು ದೇವಸ್ಥಾನವನ್ನ ಇತ್ತೇಚೆಗೆ ಜೀರ್ಣೋದ್ಧಾರ ಮಾಡಿರುವ ಗ್ರಾಮಸ್ಥರ ನಂಬುಗೆಯನ್ನ ಮತ್ತಷ್ಟು ಹೆಚ್ಚಿಸುವಂತ ಘಟನೆಯಿದು. ಶ್ರೀ ದುರ್ಗಾದೇವಿಯ ಕೊರಳಲ್ಲಿದ್ದ ಬಂಗಾರದ ಆಭರಣಗಳನ್ನೇ ನಕಲಿ ಎಂದು ಬಿಟ್ಟು ಹೋಗಿರುವ ಪ್ರಸಂಗ ನಡೆದಿದೆ.
ಯಾವ ಬಂಗಾರವನ್ನ ಕದಿಯಲು ರೂಪುರೇಷೆ ರಚಿಸಿ ಶ್ರೀ ದುರ್ಗಾದೇವಿಯ ದೇವಸ್ಥಾನದ ಒಳಗೆ ಹೋಗಿದ್ದ ಕಳ್ಳರು, ಅಸಲಿ ಬಂಗಾರವನ್ನ ನಕಲಿ ಇರಬಹುದೆಂದು ಶಂಕೆ ವ್ಯಕ್ತಪಡಿಸಿ ಖಾಲಿ ಕೈಯಲ್ಲಿ ಮರಳಿದ್ದಾರೆ. ಅಲ್ಲಿಯೇ ಇದ್ದ ಹಣದ ಹುಂಡಿಯನ್ನ ಮುಟ್ಟದೇ ಮರಳಿ ಹೋಗಿರುವುದು ಭಕ್ತರಲ್ಲಿ ಮತ್ತಷ್ಟು ಬೆರಗು ಮೂಡಿಸಿದೆ.
ಮಂದಿರದ ದ್ವಾರ ಬಾಗಿಲ ಬಳಿ ಒಂದಿಷ್ಟು ಟೈಲ್ಸಗಳು ಒಡೆದಿದ್ದು, ಗ್ರಾಮಸ್ಥರೇ ಮುಂದಾಗಿ ಅದನ್ನ ಸರಿಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆದಿದೆ.