ಧಾರವಾಡದ “ಎಸಿಎಫ್” ಮನೆ ಮೇಲೂ ಎಸಿಬಿ ದಾಳಿ..!
1 min readಚಿತ್ರದುರ್ಗ: ಧಾರವಾಡ ಸೋಷಿಯಲ್ ವಿಭಾಗದ ಎಸಿಎಫ್ ಆಗಿರುವ ಶ್ರೀನಿವಾಸ ಅವರ ಮನೆಯೂ ಸೇರಿದಂತೆ ಅವರಿಗೆ ಸಂಬಂಧಿಸಿದ ಐದು ಸ್ಥಳಗಳಲ್ಲಿ ಎಸಿಬಿ ದಾಳಿ ಮಾಡಿದೆ. ಧಾರವಾಡ ಅರಣ್ಯ ಇಲಾಖೆಯ ಸೋಷಿಯಲ್ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಶ್ರೀನಿವಾಸ, ಕಳೆದ ಕೆಲವು ತಿಂಗಳುಗಳಿಂದ ಇಲ್ಲಿಯೇ ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಅರಣ್ಯ ಇಲಾಖೆಯ ಕೆಲವು ಪ್ರದೇಶಗಳಲ್ಲಿ ಹೊಸದಾಗಿ ಗಿಡಗಳನ್ನ ನೆಡುವುದು ಮತ್ತು ಇಲಾಖೆಯ ಯೋಜನೆಗಳನ್ನ ಜನರಿಗೆ ತಲುಪಿಸುವಲ್ಲಿ ಶ್ರೀನಿವಾಸ ಅವರು ಕಾರ್ಯನಿರ್ವಹಣೆ ಮಾಡುತ್ತಿದ್ದರು.
ಇಂದು ಬೆಳ್ಳಂಬೆಳಿಗ್ಗೆ ಚಿತ್ರದುರ್ಗದ ಅವರ ಮನೆಯೂ ಸೇರಿದಂತೆ ಈಗಾಗಲೇ ಲಕ್ಷಾಂತರ ನಗ-ನಗದು ದಾಳಿಯ ವೇಳೆಯಲ್ಲಿ ದೊರಕಿದ್ದು, ಇನ್ನಷ್ಟು ಪ್ರಾಪರ್ಟಿ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಧಾರವಾಡದಲ್ಲಿಯೂ ಅವರ ಬಗ್ಗೆಯೂ ಹಲವು ದೂರುಗಳು ಕೇಳಿ ಬಂದಿದ್ದವು.
ಹುಬ್ಬಳ್ಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಅವರ ಮನೆ ಹಾಗೂ ಅವರ ಸಂಬಂಧಿಕರ ಮನೆ ಮೇಲೆ ದಾಳಿ ಮುಂದುವರೆದಿದ್ದು, ಮನೆಯಲ್ಲಿರುವ ನಗ-ನಗದು ಲೆಕ್ಕಾಚಾರ ಮಾಡಲಾಗುತ್ತಿದೆ.
ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ ಕೆ. ಶಿಗ್ಗಾಂವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿ, ಆದಾಯಕ್ಕಿತ ಹೆಚ್ವಿನ ಚರ-ಚಿರಾಸ್ತಿಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ.
ದೇವರಾಜ ಅವರ ಇಲ್ಲಿನ ಅಕ್ಷಯ ಪಾರ್ಕ್ ಬಳಿಯ ರಾಜೀವಗಾಂಧಿ ನಗರ ನಿವಾಸ ಹಾಗೂ ಇವರ ತಾಯಿಯ ಗೋಕುಲ ರಸ್ತೆ ಕೋಟಿಲಿಂಗನಗರ ಹಾಗೂ ಇವರ ಮಾವನ ಬೆಂಗೇಇ ಬಳಿಯ ಬಾಲಾಜಿ ನಗರದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ, ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.