ಬೀದಿಯಲ್ಲಿದ್ದ ವೃದ್ಧೆಗೆ ಬದುಕು ಕೊಟ್ಟ ಮಾನವಂತರು- ಪೊಲೀಸರ ಸಾಥ್…!
1 min readಧಾರವಾಡ: ಸದಾಕಾಲ ದೇವರ ಸ್ಮರಣೆಯ ಮಾಡುತ್ತ ಅಲ್ಲಿಂದಲೇ ಸಂಚಾರಿಸುವ ಸಾವಿರಾರೂ ಜನರಿಗೆ ಕಾಣದ ನೋವವೊಂದನ್ನ ಧಾರವಾಡದ ಮಾನವೀಯತೆ ಹೊಂದಿದವರು ಪತ್ತೆ ಹಚ್ಚಿ, ಆಕೆಗೊಂದು ಸುಂದರ ಬದುಕು ಕೊಡಲು ಮುಂದಾದ ಘಟನೆಯಿದು.
ಹೌದು.. ಧಾರವಾಡದ ಕೆಸಿಡಿ ವೃತ್ತದಲ್ಲಿರುವ ಗಣಪತಿ ದೇವಸ್ಥಾನದ ಬಳಿ ಹಲವು ದಿನಗಳಿಂದ ಮಲಗುತ್ತಿದ್ದ ನಿರ್ಗತಿಕ ವೃದ್ಧೆಯನ್ನ ಧಾರವಾಡ ಉಪನಗರ ಠಾಣೆ ಪೊಲೀಸ್ ಇನ್ಸಪೆಕ್ಟರ್ ಪ್ರಮೋದ ಯಲಿಗಾರ, ಎನ್ ಜಿಓದ ಮಂಗಳಾ ಹಾಗೂ ಭ್ರಷ್ಟಾಚಾರ ನಿರ್ಮೂಲನೆ, ಮಾನವ ಹಕ್ಕುಗಳ ರಕ್ಷಣಾ ಸಮಿತಿಯು, ಸಾಧನಾ ಅನಾಥಾಶ್ರಮಕ್ಕೆ ಕಳಿಸಿಕೊಟ್ಟರು.
ಹಲವು ದಿನಗಳಿಂದ ನಿರ್ಗತಿಕಳಂತೆ ಜೀವನ ನಡೆಸುತ್ತಿದ್ದ ವೃದ್ಧೆಯನ್ನ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಬಸವರಾಜ ಆನೇಗುಂದಿ ಜೊತೆಗೂಡಿ, ಸಾಧನಾ ವೃದ್ಧಾಶ್ರಮಕ್ಕೆ ಕಳಿಸಿಕೊಟ್ಟರು. ಸ್ವತಃ ವೃದ್ಧಾಶ್ರಮಯದ ಸತೀಶ ಸರ್ಜಾಪುರ ಆಗಮಿಸಿ, ವೃದ್ಧೆಗೆ ಚೆಂದದ ಜೀವನ ಕೊಡುವುದಾಗಿ ಹೇಳಿ ಕರೆದುಕೊಂಡು ಹೋದರು.
ಪೊಲೀಸ್ ಸಿಬ್ಬಂದಿಗಳಾದ ಆರ್.ಎಫ್.ನಾಯ್ಕರ, ವಿ.ಎಂ.ಗುರುಒಡೆಯರ ಹಾಗೂ ಸುನೀಲ ಚವ್ಹಾಣ ಉಪಸ್ಥಿತರಿದ್ದರು.